Spread the love

ಕಾಂತಾರ ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ಯಶಸ್ಸು ಕಾಣೋದ್ರ ಜೊತೆಗೆ ದಾಖಲೆ ಮೇಲೆ ದಾಖಲೆ ಮಾಡಿದೆ. ಈಗಾಗಲೇ ಪರ ಭಾಷೆಯಲ್ಲೂ ಸದ್ದು ಮಾಡಿದೆ. ಬೇರೆ ಭಾಷೆಯವರೂ ಕೂಡ ಈ ಸಿನಿಮಾವನ್ನು ಹೊಗಳುತ್ತಿದ್ದಾರೆ. ಇಷ್ಟು ದಿನ ಥಿಯೇಟರ್ ನಲ್ಲಿ ಸಿನಿಮಾ ನೋಡಿದ್ದ ಜನ ಇದೀಗ ಟಿವಿ ಪರದೆಯಲ್ಲೂ ಸಿನಿಮಾ ನೋಡಲು ಕಾತುರರಾಗಿದ್ದಾರೆ.

 

ಹೌದು, ಟಿವಿಯಲ್ಲಿ ಈ ಸಿನಿಮಾ ಯಾವಾಗ ಬರಲಿದೆ ಎಂಬ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ದೊರಕಿದೆ. ಸಂಕ್ರಾಂತಿ ಹಬ್ಬದಂದು ಈ ಸಿನಿಮಾ ತೆರೆಗೆ ಬರಲಿದೆಯಂತೆ. ಜನವರಿ 15 ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಸಿನಿಮಾ ಪ್ರಸಾರವಾಗಲಿದೆ. ಈ ಮೂಲಕ ಸಿನಿಮಾ ಪ್ರಿಯರಿಗೆ ಹಬ್ಬದೂಟವೇ ಸರಿ.

ಹೊಂಬಾಳೆ ಸಂಸ್ಥೆ ನಿರ್ಮಾಣದ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ಈ ಸಿನಿಮಾದಲ್ಲಿಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ದೀಪಕ್ ರೈ, ಗುರು ಸನಿಲ್, ಪ್ರಕಾಶ್ ತುಮಿನಾಡು, ರಂಜನ್, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್ ಸೇರಿದಂತೆ ಇನ್ನು ಅನೇಕರು ನಟಿಸಿದ್ದಾರೆ‌.


Spread the love

By admin