Spread the love

ಸಾಕಷ್ಟು ವಿವಾದ ಹುಟ್ಟುಹಾಕಿರುವ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾದ ಟ್ರೈಲರ್ ನಿನ್ನೆಯಷ್ಟೇ ರಿಲೀಸ್ ಆಗಿದೆ. ಸಿನಿಮಾದ ಹಲವು ಅಂಶಗಳನ್ನು ಈ ಟ್ರೈಲರ್ ನಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಉಗ್ರವಾದಿಗಳು ಮತ್ತು ಭಾರತದ ರಕ್ಷಣೆ ಹೊತ್ತ ‘ರಾ’ ಏಜೆಂಟ್ ನಡುವಿನ ಕಥಾಹಂದರ ಇದಾಗಿದ್ದು, ದೇಶದ ಅಪ್ಪಟ ಪ್ರೇಮಿಯೊಬ್ಬ ಭಯೋತ್ಪಾದಕರನ್ನು ಹೇಗೆ ಹಿಮ್ಮೆಟ್ಟಿಸುತ್ತಾನೆ ಎನ್ನುವ ಸಾರವನ್ನು ಸಿನಿಮಾ ಹೊಂದಿದೆ.

ಹೀಗಾಗಿಯೇ ಇದೊಂದು ಅಪ್ಪಟ ದೇಶಭಕ್ತಿ ಸಾರುವ ಸಿನಿಮಾ ಎಂದಿದ್ದಾರೆ ನಟ ಶಾರುಖ್ ಖಾನ್.

ಅನೇಕ ಅಚ್ಚರಿ ಸಂಗತಿಗಳಿಂದ ಪಠಾಣ್ ಸಿನಿಮಾದ ಟ್ರೈಲರ್ ಗಮನ ಸೆಳೆಯುತ್ತಿದೆ. ಕೆಲವು ಪಾತ್ರಗಳ ಹಿನ್ನೆಲೆಯನ್ನೂ ಟ್ರೈಲರ್ ನಲ್ಲಿ ರಿವಿಲ್ ಮಾಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಈ ಸಿನಿಮಾದಲ್ಲಿ ಖ್ಯಾತ ಬಾಲಿವುಡ್ ನಟ ಜಾನ್ ಅಬ್ರಾಹಂ ಉಗ್ರ ಸಂಘಟನೆಯ ಮುಖ್ಯಸ್ಥನಾಗಿ ಕಾಣಸಿಕೊಂಡಿದ್ದರೆ, ಶಾರುಖ್ ರಾ ಏಜೆಂಟ್ ಪಾತ್ರವನ್ನು ನಿಭಾಯಿಸಿದ್ದಾರೆ.

ಔಟ್ ಫುಟ್ ಎಕ್ಸ್ ಎನ್ನುವ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಜಾನ್ ಅಬ್ರಾಹಂ, ಈ ಸಂಘಟನೆಯ ಮೂಲಕ ಭಾರತದ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಾರೆ. ಈ ದಾಳಿಯನ್ನು ಭಾರತ ರಾ ಏಜೆಂಟ್ ಆಗಿರುವ ಶಾರುಖ್ ಖಾನ್ ಹೇಗೆ ತಡೆಯುತ್ತಾರೆ ಎನ್ನುವುದೇ ಪಠಾಣ್ ಸಿನಿಮಾದ ಕಥಾ ಹಂದರ. ಟ್ರೈಲರ್ ನಲ್ಲಿ ಶಾರುಖ್ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಅನೇಕ ಸಾಹಸಮಯ ದೃಶ್ಯಗಳಲ್ಲಿ ಅವರು ವಯಸ್ಸಿಗೂ ಮೀರಿದ ಆಯಕ್ಷನ್ ಮಾಡಿದ್ದಾರೆ.

ನಾನಾ ಕಾರಣಗಳಿಂದಾಗಿ ವಿವಾದಕ್ಕೆ ಕಾರಣವಾಗಿರುವ ಈ ಸಿನಿಮಾ, ದೇಶಪ್ರೇಮವನ್ನು ಸಾರಲಿದೆ ಎಂದು ಈ ಹಿಂದೆಯೇ ಶಾರುಖ್ ಹೇಳಿದ್ದರು. ಸಿನಿಮಾ ನೋಡಿದ ನಂತರ ಮಾತನಾಡಿ ಎಂದೂ ಅವರು ವಿರೋಧಿಗಳಿಗೆ ಪ್ರತಿಕ್ರಿಯಿಸಿದ್ದರು. ಕಥಾ ಹಂದರ ಮತ್ತು ಶಾರುಖ್ ಮಾಡಿರುವ ಪಾತ್ರವನ್ನು ಗಮನಿಸಿದರೆ, ಉಗ್ರರಿಂದ ಭಾರತವನ್ನು ತಪ್ಪಿಸುವಂತಹ ಕಥಾಹಂದರ ಹೊಂದಿದೆ ಎಂದು ತಿಳಿದು ಬರುತ್ತಿದೆ.


Spread the love

By admin