Spread the love

ಬಿಗ್ ಬಾಸ್​ ಸ್ಪರ್ಧಿಗಳಾಗಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಪ್ರೀತಿಸಿ ಮದುವೆಯಾದವ್ರು. ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಯಕ್ಟೀವ್ ಆಗಿದ್ದಾರೆ. ಇಬ್ಬರು ಸೇರಿಕೊಂಡು ರೀಲ್ಸ್ ಮಾಡುತ್ತಾರೆ, ಈ ರೀಲ್ಸ್ ಮೂಲಕವೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ರೀಲ್ಸ್​ನಲ್ಲಿ ಚಂದನ್​ ಶೆಟ್ಟಿ ಅವರು ನಿವೇದಿತಾರನ್ನು ನಾನು ಹೇಳುವುದನ್ನು ಕೂಡಿಸಿ ಹೇಳು ಎಂದು ಹೇಳ್ತಾರೆ. Fat + Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್​ ಶೆಟ್ಟಿ ಕೇಳಿದ್ದಾರೆ. Fat her ಅಂತಾರೆ ಬಳಿಕ ಸರಿಯಾಗಿ ಕೂಡಿಸು ಎಂದು ಹೇಳಿದಾಗ ನಿವೇದಿತಾ ಗೌಡ ‘ಫಾದರ್​’ ಎಂದು ನಾಚಿಕೊಳ್ತಾರೆ. ಹಾಗಾಗಿ ಚಂದನ್​ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್​ ಅಂದಾಜಿಸಿದ್ದಾರೆ.

ನಿವೇದಿತಾ, ಚಂದನ್​ಗೆ ಇನ್ಟಾ ಗ್ರಾಮ್​ ನಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಇದ್ದು, ಅಭಿಮಾನಿಗಳು ಕೂಡ ಇವರ ಫೋಟೋ ಹಾಗೂ ವಿಡಿಯೋಗಳನ್ನು ನೋಡೋಕೆ ಇಷ್ಟ ಪಡುತ್ತಾರೆ. ಈಗ ಚಂದನ್​ ಶೆಟ್ಟಿ ಹಂಚಿಕೊಂಡಿರುವ ಈ ವಿಡಿಯೋ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ವಿಡಿಯೋ ನೋಡಿದ ಫ್ಯಾನ್ಸ್​ ನಿವೇದಿತಾ ಹಾಗೂ ಚಂದನ್ ಶೆಟ್ಟಿಗೆ ವಿಶ್ ಮಾಡ್ತಿದ್ದಾರೆ.


Spread the love

By admin