Spread the love

ತಮ್ಮ ಗೆಳೆಯ, ಮೈಸೂರಿನ ಆದಿಲ್ ದುರಾನಿ ಜೊತೆ ರಾಖಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ, ಇಬ್ಬರು ಸಹ ಹೂವಿನ ಹಾರ ಹಾಕಿಕೊಂಡಿರುವ ಫೋಟೋಗಳು ವೈರಲ್​ ಆಗಿದ್ದು, ಸಾವಂತ್ ಮತ್ತು ಆದಿಲ್​ ವಿವಾಹವನ್ನು ಸಾಕ್ಷೀಕರಿಸುವಂತಿವೆ.

ರಾಖಿ ಸಾವಂತ್ ಮತ್ತು ಆದಿಲ್ ದುರಾನಿ ಸಾಮಾನ್ಯವಾಗಿ ಮಾಧ್ಯಮಗಳು ಸುದ್ದಿಯಲ್ಲೇ ಇರುತ್ತಾರೆ. ಆದಿಲ್​ಗಾಗಿ ರಾಖಿ ಮೈಸೂರಿಗೂ ಬಂದಿದ್ದರು. ಇಬ್ಬರು ಸಹ ಬಹಿರಂಗವಾಗಿ ಒಟ್ಟಿಗೆ ಮಾಧ್ಯಮಗಳ ಮುಂದೆ ಬಂದಿದ್ದರು. ಆದಾಗ್ಯೂ, ಇಬ್ಬರೂ ತಮ್ಮ ಮದುವೆ ವಿಷಯವನ್ನು ಮುಚ್ಚಿಟ್ಟು ಗೌಪ್ಯವಾಗಿ ಜೀವನದ ಹೊಸ ಇನ್ನಿಂಗ್ಸ್​​ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ರಾಖಿ ಮತ್ತು ಆದಿಲ್ ಅವರ ವೈರಲ್ ಫೋಟೋಗಳು ಸಖತ್​ ಸದ್ದು ಮಾಡುತ್ತಿವೆ.

ಕಳೆದ ವರ್ಷವೇ ವಿವಾಹ ಬಂಧನ?.. ಡ್ರಾಮಾ ಕ್ವೀನ್ ಎಂದೇ ಹೆಸರಾಗಿರುವ​ ರಾಖಿ ಸಾವಂತ್ ಚಿಕ್ಕ ವಿಷಯಗಳಿಂದಲೂ ಸುದ್ದಿ ಆಗುತ್ತಲೇ ಇರುತ್ತಾರೆ. ಆದರೆ, ತಮ್ಮ ಮದುವೆಯ ವಿಷಯವನ್ನು ಮಾತ್ರ ತಿಂಗಳುಗಳ ಕಾಲ ರಹಸ್ಯವಾಗಿರಿಸಿದ್ದರಾ ಎಂಬ ಅನುಮಾನ ಈಗ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, 2022ರ ಮೇ 5ರಂದೇ ಗೆಳೆಯ ಆದಿಲ್ ದುರಾನಿ ಅವರನ್ನು ರಾಖಿ ವರಿಸಿದ್ದಾರೆ ಎಂದು ಹೇಳಲಾಗುತ್ತಿದೆ.


Spread the love

By admin