Spread the love

2022ರ ಸೆಪ್ಟೆಂಬರ್ 30 ರಂದು ರಿಲೀಸ್​ ಆದ ಕಾಂತಾರ ಸಿನಿಮಾ ಜನವರಿ 7ರಂದು 100 ದಿನವನ್ನು ಪೂರೈಸಿರುವ ಖುಷಿಯಲ್ಲಿದೆ. ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವ ಕಾಂತಾರ ಮತ್ತೊಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸುವ ಮುನ್ಸೂಚನೆ ಕೊಟ್ಟಿದೆ.

ಆಸ್ಕರ್​ ಅರ್ಹತೆ: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ನಟ ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಕಾಂತಾರ ಆಸ್ಕರ್​ ರೇಸ್​​ಗೆ ಪದಾರ್ಪಣೆ ಮಾಡಿದೆ. ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ವಿಭಾಗದಲ್ಲಿ ಕಾಂತಾರಾ ಅರ್ಹತೆಯ ಸುತ್ತನ್ನು ಪಾಸ್ ಮಾಡಿದೆ. ಸದ್ಯ 301 ಸಿನಿಮಾಗಳು ಅರ್ಹತೆ ಸುತ್ತನ್ನು ಪಾಸ್ ಮಾಡಿವೆ. ಈ ಪೈಕಿ ನಮ್ಮ ಕಾಂತಾರ ಕೂಡ ಒಂದು. ಈ ಚಿತ್ರ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್​ ಟ್ವೀಟ್ ಮೂಲಕ ಶುಭ ಸುದ್ದಿಯನ್ನು ಹಂಚಿಕೊಂಡಿದೆ.


Spread the love

By admin