Spread the love

ಗುವಾಹಟಿ: ವಿಶ್ವಕಪ್​ ಕಳಪೆ ಪ್ರದರ್ಶನದ ಬಳಿಕ ಟಿ20 ಕ್ರಿಕೆಟ್ ಮಾದರಿಯಿಂದ ಸ್ವಲ್ಪ ದೂರ ಉಳಿದಿರುವ ನಾಯಕ ರೋಹಿತ್​ ಶರ್ಮಾ ಕಮ್​ಬ್ಯಾಕ್​ ಮಾಡುವ ಸೂಚನೆ ನೀಡಿದ್ದಾರೆ.

ಮುಂದಿನ ಐಪಿಎಲ್​ ಬಳಿಕ ತಾವು ಅಂತಾರಾಷ್ಟ್ರೀಯ ಟಿ20 ಆಡುವುದಾಗಿ ಹೇಳಿದ್ದಾರೆ. ಟಿ20 ಕ್ರಿಕೆಟ್ ಬಿಡುವ ಬಗ್ಗೆ ಸದ್ಯ ನಿರ್ಧಾರ ಮಾಡಿಲ್ಲ. ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದರು.

ಶ್ರೀಲಂಕಾ ವಿರುದ್ಧ ನಡೆಯುವ ಮೊದಲ ಏಕದಿನ ಪಂದ್ಯಕ್ಕೂ ಮೊದಲು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್​, ನಾವು ಈ ಋತುವಿನಲ್ಲಿ ಕೇವಲ 6 ಟಿ20 ಪಂದ್ಯಗಳನ್ನು ಮಾತ್ರ ಹೊಂದಿದ್ದೇವೆ. ಈಗಾಗಲೇ ಮೂರು ಮ್ಯಾಚ್​ ಮುಗಿದಿದೆ. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ನಾವು ಕಾಣಿಸಿಕೊಳ್ಳುತ್ತೇವೆ. ಐಪಿಎಲ್​ ಬಳಿಕ ನೀವು ಬದಲಾವಣೆ ಕಾಣಬಹುದು. ಯಾರೆಲ್ಲ ಈಗ ತಂಡದಿಂದ ಹೊರಗಿದ್ದಾರೋ ಅವರು ಮತ್ತೆ ವಾಪಸ್​ ಆಗಲಿದ್ದಾರೆ ಎಂದು ಹೇಳಿದರು.

ಐಪಿಎಲ್ ನಂತರ ಏನಾಗುತ್ತದೆ ಎಂಬುದನ್ನು ನೀವೇ ನೋಡುತ್ತೀರಿ. ಹೊಡಿಬಡಿ ಆಟವನ್ನು ನಾನು ಬಿಟ್ಟುಕೊಡಲು ನಿರ್ಧರಿಸಿಲ್ಲ. ಆ ಮಾದರಿಯಲ್ಲಿ ಆಡುವುದನ್ನು ನಾನು ಮುಂದುವರಿಯಲು ಇಚ್ಚಿಸುವೆ ಎನ್ನುವ ಮೂಲಕ ಟಿ20ಯಿಂದ ಹಿಂದೆ ಸರಿಯಲಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದರು.


Spread the love

By admin