Spread the love

ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಟೆನಿಸ್‌ ಗೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಿವೃತ್ತಿ ಬಗ್ಗೆ ಪೋಸ್ಟ್ ಮಾಡುವ ಮೂಲಕ ವೃತ್ತಿಪರ ಟೆನಿಸ್‌ ನಿಂದ ನಿವೃತ್ತಿ ಘೋಷಿಸಿದ್ದಾರೆ.

ಈ ಪೋಸ್ಟ್‌ ನಲ್ಲಿ ಆಸ್ಟ್ರೇಲಿಯನ್ ಓಪನ್ ನಂತರ ತನ್ನ ಮಗನೊಂದಿಗೆ ಹೆಚ್ಚು ಸಮಯ ಕಳೆಯುತ್ತೇನೆ.

ಟೆನಿಸ್‌ ನಿಂದ ನಿವೃತ್ತಿ ಹೊಂದುತ್ತೇನೆ ಎಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ ನಲ್ಲಿ ಸಾನಿಯಾ ತುಂಬಾ ಭಾವನಾತ್ಮಕ ವಿಷಯಗಳನ್ನು ಬರೆದಿದ್ದಾರೆ. ಈ ಬಾರಿ ಅವರು ತಮ್ಮ ಮಗನೊಂದಿಗೆ ಹೆಚ್ಚು ಸಮಯ ಕಳೆಯಲು ಆಸ್ಟ್ರೇಲಿಯನ್ ಓಪನ್‌ನ ನಂತರ ನಿವೃತ್ತಿ ಹೊಂದುತ್ತಿದ್ದಾರೆ. ಮಗನಿಗೆ ಈಗ ನನ್ನ ಅವಶ್ಯಕತೆ ಹೆಚ್ಚಿದೆ ಎಂದು ಹೇಳಿಕೊಂಡಿದ್ದಾರೆ.

30 ವರ್ಷಗಳ ಹಿಂದೆ, ಹೈದರಾಬಾದ್‌ನಲ್ಲಿ ಆರು ವರ್ಷದ ಬಾಲಕಿ ತನ್ನ ತಾಯಿಯೊಂದಿಗೆ ಮೊದಲ ಬಾರಿಗೆ ಟೆನಿಸ್ ಕೋರ್ಟ್‌ಗೆ ಹೋದಳು. ತರಬೇತುದಾರ ಟೆನಿಸ್ ಹೇಗೆ ಆಡಬೇಕೆಂದು ವಿವರಿಸಿದರು. ನಾನು ಟೆನಿಸ್ ಕಲಿಯಲು ತುಂಬಾ ಚಿಕ್ಕವನಿದ್ದೇನೆ ಎಂದು ನಾನು ಭಾವಿಸಿದ್ದೆ. ನನ್ನ ಕನಸುಗಳ ಹೋರಾಟವು ಆರನೇ ವಯಸ್ಸಿನಲ್ಲಿ ಪ್ರಾರಂಭವಾಯಿತು. ಸಾನಿಯಾ ಅವರ ಈ ಪೋಸ್ಟ್ ತನ್ನ ಬಾಲ್ಯದ ಫೋಟೋಗಳು ಮತ್ತು ಅವರ ಯೌವನದ ಫೋಟೋಗಳನ್ನು ತೋರಿಸಲಾಗಿದೆ.


Spread the love

By admin