Spread the love

ಕೊಲ್ಕೊತ್ತಾ: ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಅವರ ಭರ್ಜರಿ ಬೌಲಿಂಗ್ ನಂತರ ಕೆ.ಎಲ್. ರಾಹುಲ್ ಅರ್ಧಶತಕದ ನೆರವಿನಿಂದ ಭಾರತ ಗುರುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

 

ಕೊಲ್ಕೊತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 39.4 ಓವರ್ ಗಳಲ್ಲಿ 215 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ನುವನೀದು ಫೆರ್ನಾಂಡೊ 50, ಕುಸಾಲ್ ಮೆಂಡಿಸ್ 34, ದುನಿತ್ 32 ರನ್ ಗಳಿಸಿದರು. ಭಾರತದ ಪರವಾಗಿ ಮೊಹಮ್ಮದ್ ಸಿರಾಜ್ 3, ಕುಲದೀಪ್ ಯಾದವ್ 3, ಉಮ್ರಾನ್ ಮಲಿಕ್ 2, ಅಕ್ಷರ ಪಟೇಲ್ 1 ವಿಕೆಟ್ ಪಡೆದರು.

ರೋಹಿತ್ ಶರ್ಮಾ 17, ಶುಭಮನ್ ಗಿಲ್ 21, ವಿರಾಟ್ ಕೊಹ್ಲಿ 4, ಶ್ರೇಯಸ್ ಅಯ್ಯರ್ 28, ಕೆ.ಎಲ್. ರಾಹುಲ್ ಅಜೇಯ 64, ಹಾರ್ದಿಕ್ ಪಾಂಡ್ಯ 36, ಅಕ್ಷರ ಪಟೇಲ್ 21, ಕುಲದೀಪ್ ಯಾದವ್ ಅಜೇಯ 10 ರನ್ ಗಳಿಸಿದರು. ಭಾರತ 43.2 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 219 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ಶ್ರೀಲಂಕಾ ಪರವಾಗಿ ಕಸುನ್ ರಜಿತ 1, ಲಹಿರು ಕುಮಾರ 2, ಚಾಮಿಕ ಕರುಣರತ್ನ 2, ಧನಂಜಯ ಡಿಸಿಲ್ವ 1 ವಿಕೆಟ್ ಪಡೆದರು.


Spread the love