Spread the love

ಹೈದರಾಬಾದ್‌: ನಾಯಿಗೆ ಹೆದರಿ ಆಹಾರ ವಿತರಣಾ ಯುವಕ ಮೂರನೇ ಮಹಡಿಯಿಂದ ಜಿಗಿದಿರುವ ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.ರಿಜ್ವಾನ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಹಾರದ ಪೊಟ್ಟಣವನ್ನು ಗ್ರಾಹಕರಿಗೆ ನೀಡಲು ಹೋದಾಗ ಈ ಘಟನೆ ಸಂಭವಿಸಿದೆ.

ಗ್ರಾಹಕರ ಜರ್ಮನ್ ಶೆಫರ್ಡ್ ನಾಯಿಯು ಈತ ಬರುತ್ತಿದ್ದಂತೆಯೇ ಅವನನ್ನು ನೋಡಿ ಬೆನ್ನಟ್ಟಲು ಪ್ರಾರಂಭಿಸಿತು. ಇದರಿಂದ ಭಯಗೊಂಡ ಯುವಕ ಮಹಡಿಯಿಂದ ಜಿಗಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

“ಯುವಕನ ಪರಿಸ್ಥಿತಿ ಗಂಭೀರವಾಗಿದ್ದು, ಆತ ಪ್ರಜ್ಞಾಹೀನನಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಬಂಜಾರ ಹಿಲ್ಸ್ ಪೊಲೀಸರು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love