Spread the love

ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ವರಿಷ್ಠರು ಕರೆ ಮಾಡಿದ್ದು, ಸಂಕ್ರಾಂತಿ ಹಬ್ಬದಂದೇ ಶುಭ ಸುದ್ದಿ ನೀಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಈ ಬಗ್ಗೆ ಮಾಹಿತಿ ನೀಡಿದ್ದು, ವರಿಷ್ಠರು ಇಂದು ಬೆಳಿಗ್ಗೆ ಕರೆ ಮಾಡಿದ್ದು, ಮೀಸಲಾತಿ ವಿಚಾರವಾಗಿ ಸಭೆ ನಡೆಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

 

ಮಕರ ಸಂಕ್ರಮಣದ ಉತ್ತರಾಯಣದ ಶುಭ ಸಂದರ್ಭದಲ್ಲಿ ಹೈಕಮಾಂಡ್ ನಿಲುವು ತೆಗೆದುಕೊಂಡಿದೆ. ಇದು ಬಸವಜಯಮೃತ್ಯುಂಜಯ ಸ್ವಾಮಿಗಳ ಪಾದಯಾತ್ರೆ ಪ್ರತಿಫಲ. ಆದಷ್ಟು ಬೇಗ ಶ್ರೀಗಳ ನೇತೃತ್ವದಲ್ಲಿ ಕೇಂದ್ರ ನಾಯಕರನ್ನು ಭೇಟಿಯಾಗುತ್ತೇವೆ. ಶೀಘ್ರವೇ ನಮ್ಮ ಸಮುದಾಯಕ್ಕೆ ಒಳ್ಳೆಯ ಸುದ್ದಿ ಕೊಡಲಿ. ಪಕ್ಷದ ನಾಯಕರು ಎಲ್ಲವನ್ನು ಗಮನಿಸಿಯೇ ಕರೆ ಮಾಡಿ ಹೇಳಿದ್ದಾರೆ ಎಂದರು.


Spread the love

By admin