Spread the love

ಬೆಂಗಳೂರು: ಕಾರಾಗೃಹ ಅಧಿಕಾರಿಗಳ ವರ್ಗಾವಣೆ ಆದೇಶ ಪತ್ರಕ್ಕೆ ಸ್ಯಾಂಟ್ರೋ ರವಿ ಸಂಭ್ರಮಿಸಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.

ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ, ಅದೇ ಸತ್ಯವೆಂದು ಜನ ಭಾವಿಸುತ್ತಾರೆ ಎಂದು ಕಾಂಗ್ರೆಸ್ ನಾಯಕರು ನಂಬಿದಂತಿದೆ.

ವರ್ಷದ ಮಧ್ಯದ ಅವಧಿಯಲ್ಲಿ ಕಾರಾಗೃಹ ಇಲಾಖೆಯಲ್ಲಿ ಸಿಬ್ಬಂದಿಯ ವರ್ಗಾವಣೆ ಪ್ರಕ್ರಿಯೆ ನಡೆಯುವುದಿಲ್ಲ ಎಂಬ ಪ್ರಾಥಮಿಕ ಪರಿಜ್ಞಾನವೂ ಕಾಂಗ್ರೆಸ್ ಗೆ ಇಲ್ಲ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಉಲ್ಲೇಖಿಸಿದಂತಹ ವರ್ಗಾವಣೆ ನಡೆದೇ ಇಲ್ಲ. ಯಾರದ್ದೋ ಸಮಾಜ ದ್ರೋಹಿ ಭಾವನೆಗಳಿಗೆ ಸಂಭ್ರಮಿಸುವ ಕಾಂಗ್ರೆಸ್ ನಾಯಕರ ನಾಚಿಕೆಗೇಡಿನ ನಡವಳಿಕೆಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದ್ದಾರೆ.


Spread the love

By admin