Spread the love

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಮಾಧಾನಕರ ಸುದ್ದಿಯಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಇನ್ನೆರಡು ವಾರಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಲಿಗಾಮೆಂಟ್‌ಗಳು ಸ್ವಾಭಾವಿಕವಾಗಿ ವಾಸಿಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಪಂತ್ ಅವರನ್ನು ಆಬ್ಸರ್ವೇಶನ್‌ನಲ್ಲಿ ಇರಿಸಲಾಗಿದೆ.

ಲಿಗಾಮೆಂಟ್‌ಗಳು ಗುಣಮುಖವಾದ ನಂತರ ಆಸ್ಪತ್ರೆಯಿಂದ ಪಂತ್‌ ಡಿಸ್ಚಾರ್ಜ್‌ ಆಗುವ ಸಾಧ್ಯತೆ ಇದೆ.

ಇನ್ನೆರಡು ತಿಂಗಳ ನಂತರ ಮತ್ತೊಮ್ಮೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಚಿಕಿತ್ಸೆ ಸಂಪೂರ್ಣ ಮುಗಿದ ಬಳಿಕ ನಾಲ್ಕರಿಂದ ಆರು ವಾರಗಳಲ್ಲಿ ರಿಷಭ್‌ ಪಂತ್‌ ಕ್ರಿಕೆಟ್‌ ಆಡಲು ಪ್ರಾರಂಭಿಸಬಹುದು. ಪಂತ್‌ಗೆ ಎಂಸಿಎಲ್ ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದು ವೈದ್ಯರು ಹೇಳಿದ್ದಾರೆ. ಚೇತರಿಕೆಯ ಹಾದಿ ತುಂಬಾ ಕಠಿಣವಾಗಿರುತ್ತದೆ ಎಂಬುದನ್ನೂ ಪಂತ್ ಅರ್ಥಮಾಡಿಕೊಂಡಿದ್ದಾರಂತೆ.


Spread the love

By admin