Spread the love

ದ್ಯ ವಿಶ್ವ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ದಿಗ್ಗಜ ತಂಡವಾಗಿ ಹೊರಹೊಮ್ಮಿದೆ. ಆದ್ರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ನಂಬರ್‌ ವನ್‌ ಸ್ಥಾನದಲ್ಲಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಾಡಿರೋ ಯಡವಟ್ಟಿನಿಂದಾಗಿ ಟೀಂ ಇಂಡಿಯಾ ಮೊದಲ ಸ್ಥಾನಕ್ಕೇರಿತ್ತು.

 

ಟೆಸ್ಟ್ ತಂಡದ ಇತ್ತೀಚಿನ ಶ್ರೇಯಾಂಕಗಳನ್ನು ಐಸಿಸಿ ಬಿಡುಗಡೆ ಮಾಡಿತ್ತು. ಈ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿದೆ ಎಂದು ಪ್ರಕಟಿಸಿತ್ತು. ಬಾಂಗ್ಲಾದೇಶ ವಿರುದ್ಧದ 2 ಟೆಸ್ಟ್‌ಗಳ ಸರಣಿಯನ್ನು ಭಾರತ ಗೆದ್ದುಕೊಂಡಿತ್ತು. ಈ ಗೆಲುವಿನ ಬಳಿಕ ಭಾರತ ತಂಡ ಯಾವುದೇ ಸರಣಿಯನ್ನು ಆಡಿಲ್ಲ.

ವೆಸ್ಟ್‌ಇಂಡೀಸ್‌ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಗೆಲುವಿನ ಬಳಿಕ 126 ಅಂಕಗಳೊಂದಿಗೆ ಆಸ್ಟ್ರೇಲಿಯಾ ನಂಬರ್ ಒನ್ ಸ್ಥಾನದಲ್ಲಿತ್ತು. ಭಾರತ 111 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೆ ಐಸಿಸಿ ಪ್ರಮಾದ ಎಸಗಿದ್ದು ಭಾರತ ನಂಬರ್‌ ವನ್‌ ಸ್ಥಾನದಲ್ಲಿರುವುದಾಗಿ ಪ್ರಕಟಿಸಿತ್ತು. ತಪ್ಪಿನ ಅರಿವಾದ ಬಳಿಕ ಐಸಿಸಿ ಅದನ್ನು ಸರಿಪಡಿಸಿದೆ. ಇಂಗ್ಲೆಂಡ್ ಮೂರನೇ ಹಾಗೂ ನ್ಯೂಜಿಲೆಂಡ್ ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯು ಜನವರಿ 18 ರಂದು ಹೈದರಾಬಾದ್‌ನಲ್ಲಿ ಆರಂಭವಾಗಲಿದೆ. ಈ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 3-0 ಅಂತರದಿಂದ ಸೋಲಿಸಿದರೆ ಟೀಂ ಇಂಡಿಯಾ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಆಗುವ ಸುವರ್ಣಾವಕಾಶವನ್ನು ಹೊಂದಿದೆ.


Spread the love

By admin