Spread the love

ಮಂಡ್ಯ: ಖ್ಯಾತ ನಟಿ ರಚಿತಾ ರಾಮ್ ಅವರ ವಿರುದ್ಧ ಮದ್ದೂರು ಪೊಲೀಸ್ ಠಾಣೆಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ದೂರು ದಾಖಲಿಸಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಜನವರಿ 26ರಂದು ಮೊದಲು ನೀವು ಗಣರಾಜ್ಯೋತ್ಸವ ಆಚರಿಸುತ್ತಿದ್ದೀರಿ, ಈ ವರ್ಷ ಜನವರಿ 26ರಂದು ಕ್ರಾಂತಿಯೋತ್ಸವ ಆಚರಿಸಿ ಎಂದು ಹೇಳಿಕೆ ನೀಡಿದ್ದು, ಇದನ್ನು ವಿರೋಧಿಸಿ ದೂರು ನೀಡಲಾಗಿದೆ.

 

ಗಣರಾಜ್ಯೋತ್ಸವಕ್ಕೆ ರಚಿತಾ ರಾಮ್ ಅವಹೇಳನ ಮಾಡಿದ್ದಾರೆ ಸಂವಿಧಾನಕ್ಕೆ ಅವಮಾನ ಮಾಡುವ ರೀತಿ ಹೇಳಿಕೆ ನೀಡಿದ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ದೂರು ನೀಡಲಾಗಿದೆ.


Spread the love

By admin