Spread the love

ನಾಂಗೀಯ ಮತ್ತು ಧಾರ್ಮಿಕ ಉದ್ವಿಗ್ನತೆಗಳಿಗೆ ಹೆಸರುವಾಸಿಯಾದ ಪ್ರದೇಶವಾದ ಮಧ್ಯ ನೈಜೀರಿಯಾದಲ್ಲಿ ಬಾಂಬ್ ಸ್ಫೋಟದಲ್ಲಿ 27 ಕುರಿಗಾಹಿಗಳು ಸಾವನ್ನಪ್ಪಿದ್ದಾರೆ.

ಕುರಿಗಾಹಿಗಳು ಜಾನುವಾರುಗಳೊಂದಿಗೆ ನಸರವಾ ಮತ್ತು ಬೆನ್ಯೂ ರಾಜ್ಯಗಳ ಗಡಿಯಲ್ಲಿರುವ ರುಕುಬಿ ಎಂಬ ಹಳ್ಳಿಯಲ್ಲಿದ್ದಾಗ ಅವರ ಮಧ್ಯೆ ಬಾಂಬ್ ಸ್ಫೋಟಗೊಂಡಿದೆ.

 

ಬಾಂಬ್ ಸ್ಫೋಟದಲ್ಲಿ ಹಲವಾರು ಜಾನುವಾರುಗಳೊಂದಿಗೆ 27 ಜನರು ಸಾವನ್ನಪ್ಪಿದ್ದಾರೆ. ಇತರ ಅನೇಕ ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು. ಪೊಲೀಸ್ ಬಾಂಬ್ ತಜ್ಞರು ಸ್ಫೋಟದ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ನಸರವಾ ಪೊಲೀಸ್ ಕಮಿಷನರ್ ಮೈಯಾಕಿ ಮುಹಮ್ಮದ್ ಬಾಬಾ ಹೇಳಿದ್ದಾರೆ.

ಮಿಲಿಟರಿ ವೈಮಾನಿಕ ದಾಳಿಯ ಪರಿಣಾಮ ಸ್ಫೋಟ ಸಂಭವಿಸಿದೆ ಎಂದು ದನಗಾಹಿಗಳನ್ನು ಪ್ರತಿನಿಧಿಸುವ ಗುಂಪು ಹೇಳಿದೆ.

ಇದು ವೈಮಾನಿಕ ದಾಳಿಯಾಗಿದ್ದು, ನಮ್ಮ 27 ಜನರನ್ನು ಕೊಂದಿದೆ ಎಂದು ನೈಜೀರಿಯಾದ ಮಿಯೆಟ್ಟಿ ಅಲ್ಲಾ ಕ್ಯಾಟಲ್ ಬ್ರೀಡರ್ಸ್ ಅಸೋಸಿಯೇಶನ್‌ನ ಲಾವಲ್ ಡಾನೊ ಹೇಳಿದರು.


Spread the love