Spread the love

ನೆರೆರಾಷ್ಟ್ರ ಪಾಕಿಸ್ತಾನ, ಭಾರತದ ಮೇಲೆ ಪರಮಾಣು ದಾಳಿ ನಡೆಸಲು ತಂತ್ರ ಹೆಣೆದಿತ್ತು ಎಂಬ ಆಘಾತಕಾರಿ ಅಂಶ ಬಯಲಾಗಿದೆ. 2019ರ ಫೆಬ್ರವರಿಯಲ್ಲಿ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ನಂತರ ಪಾಕಿಸ್ತಾನ ಪರಮಾಣು ದಾಳಿಗೆ ಸಜ್ಜಾಗುತ್ತಿದೆ ಎಂದು ಆಗಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮಗೆ ತಿಳಿಸಿದ್ದರು ಎಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆಯೊ ಹೇಳಿದ್ದಾರೆ.

ಪೊಂಪೆಯೊ ಬರೆದಿರುವ ‘ನೆವರ್ ಗಿವ್ ಆನ್ ಇಂಚ್: ಫೈಟಿಂಗ್ ಫಾರ್ ಅಮೇರಿಕಾ ಐ ಲವ್’ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ.

ಪೊಂಪೆಯೊ ಪ್ರಕಾರ 2019ರ ಫೆಬ್ರವರಿ 27-28 ರಂದು ನಡೆದ ಬೆಳವಣಿಗೆ ಇದು. ಅವರು ಅಮೆರಿಕ-ಉತ್ತರ ಕೊರಿಯಾ ಶೃಂಗಸಭೆಗಾಗಿ ಹನೋಯಿಯಲ್ಲಿದ್ದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಈ ಬಿಕ್ಕಟ್ಟನ್ನು ಶಮನಗೊಳಿಸಲು ರಾತ್ರಿಯಿಡೀ ನವದೆಹಲಿ ಮತ್ತು ಇಸ್ಲಾಮಾಬಾದ್ ಎರಡೂ ಕಡೆಗಳಲ್ಲಿ ಕಸರತ್ತು ನಡೆದಿದ್ದವು. “ಫೆಬ್ರವರಿ 2019 ರಲ್ಲಿ ಭಾರತ-ಪಾಕಿಸ್ತಾನದ ಪೈಪೋಟಿಯು ಪರಮಾಣು ದಹನಕ್ಕೆ ಬಹಳಷ್ಟು ಹತ್ತಿರವಾಗಿತ್ತು ಎಂಬುದು ಜಗತ್ತಿಗೆ ತಿಳಿದಿಲ್ಲ, ಸತ್ಯವೆಂದರೆ ಉತ್ತರ ನನಗೂ ನಿಖರವಾಗಿ ಗೊತ್ತಿಲ್ಲ. ಆದರೆ ಅದು ತುಂಬಾ ಹತ್ತಿರದಲ್ಲಿದೆ ಎಂದು ನನಗೆ ತಿಳಿದಿತ್ತು” ಅಂತಾ ಪೊಂಪೆಯೊ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

2019ರ ಫೆಬ್ರವರಿಯಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪದಕರು ಪುಲ್ವಾಮಾದಲ್ಲಿ ದಾಳಿ ನಡೆಸದ್ದ ಕಾರಣ ಭಾರತದ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಯುದ್ಧ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಕೇಂದ್ರವನ್ನು ಧ್ವಂಸಗೊಳಿಸಿದ್ದವು. ಈ ಸರ್ಜಿಕಲ್‌ ಸ್ಟ್ರೈಕ್‌ ಬಳಿಕ ಭಾರತದ


Spread the love

By admin