Spread the love

ರಾಯಚೂರು: ‘ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ’ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕಿಡಿ ಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕುದುರೆ ಕೊಟ್ಟು ಕಾಲು ಕಟ್ ಮಾಡಿದ್ರೆ ಎಲ್ಲಿ ಓಡಿಸಲು ಆಗುತ್ತೆ?

ಎಂದು ತಿರುಗೇಟು ನೀಡಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಅಂದು ಕಾಂಗ್ರೆಸ್ ನವರೇ ನಮ್ಮ ಮನೆ ಬಾಗಿಲಿಗೆ ಬಂದರು ಹೊರತು ಅಧಿಕಾರಕ್ಕಾಗಿ ನಾವೇನು ಅವರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಎಲ್ಲಾ ಗೊತ್ತಿರುವವರು ನಮ್ಮ ಮನೆ ಬಾಗಿಲಿಗೆ ಯಾಕೆ ಬಂದ್ರು? ಎಂದು ಪ್ರಶ್ನಿಸಿದ್ದಾರೆ.

78 ಶಾಸಕರನ್ನು ಇಟ್ಟುಕೊಂಡು ಸರ್ಕಾರಿ ನಿವಾಸ ಬಿಟ್ಟುಕೊಡಲಿಲ್ಲ. ನಾನೇನು ರಸ್ತೆಯಲ್ಲಿ ನಿಂತು ಅಧಿಕಾರ ನಡೆಸಬೇಕಿತ್ತಾ? ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರು ಉಚಿತ, ಖಚಿತ ಎಂಬ ಘೋಷಣೆಗಳನ್ನು ಮಾಡುತ್ತಿದ್ದಾರೆ. ಈಗ ಉಚಿತ ವಿದ್ಯುತ್, 2000 ರೂಪಾಯಿ ಖಚಿತ ಎಂಬ ಸ್ಕಿಂ ಬೇರೆ ಎಂದು ವಾಗ್ದಾಳಿ ನಡೆಸಿದ್ದಾರೆ.


Spread the love

By admin