Spread the love

ಚಿಕ್ಕಬಳ್ಳಾಪುರ; ಸುಧಾಕರ್ ಮಂತ್ರಿಯಾಗಲು ನಾಲಾಯಕ್ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಆರೋಗ್ಯ ಸಚಿವ ಸುಧಾಕರ್, ಜೆಡಿಎಸ್ ನಲ್ಲಿದ್ದಾಗ ಸಿದ್ದರಾಮಯ್ಯ ಅವರನ್ನು ಯಾಕೆ ಸಿಎಂ ಮಾಡಿಲ್ಲ? ನಾನು ಲಾಯಕ್ಕಾ ಇಲ್ಲ ನಾಲಾಯಕ್ಕಾ ಎಂಬುದನ್ನು ಜನ ತೀರ್ಮಾನ ಮಾಡ್ತಾರೆ ಎಂದು ತಿರುಗೇಟು ನೀಡಿದ್ದಾರೆ.

 

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ನನ್ನ ಮಂತ್ರಿಯನ್ನಾಗಿ ಮಾಡಿದ್ದು, ಇವರಲ್ಲ, ಬಿಜೆಪಿಯವರು. ನಾನು ಲಾಯಕ್ಕಾ, ನಾಲಾಯಕ್ಕಾ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಆರೋಗ್ಯ ಸಚಿವರಾಗಿ ಸುಧಾಕರ್ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಜನ ಹೇಳುತ್ತಾರೆ. ಬೀದರ್ ನಿಂದ ಕೆಜಿಎಫ್ ವರೆಗೂ ಜನ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದಾಗ ಯಾಕೆ ಅವರನ್ನು ಸಿಎಂ ಮಾಡಲಿಲ್ಲ ಎಂದು ನಾನೂ ಕೇಳಬಹುದು. ಬರಿ ಬಾಯಿ ಚಪಲಕ್ಕೆ ಮಾತನಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ನವರಿಗೆ ನಾನು ಅಂದ್ರೆ ಭಯವಿರಬೇಕು. ನನ್ನ ಕಾರ್ಯವೈಖರಿಯ ಬಗ್ಗೆ ತಿಳಿದುಕೊಂಡಿರಬೇಕು. ನಾನು ರಾಜಕೀಯವಾಗಿ ಬೆಳೆಯುತ್ತಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆ ಟ್ ಮಾಡುತ್ತಿದ್ದಾರೆ ಎಂದು ಹೇಳಿದರು.


Spread the love

By admin