Spread the love

ತುಮಕೂರು: ಚಿತ್ರದುರ್ಗ ಮುರುಘಾ ಮಠದ ಶಾಖಾ ಮಠದ ಶಿಷ್ಯೆಯೊಬ್ಬರು ಏಕಾಏಕಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮುರುಘಾ ಮಠದ ಶಾಖಾ ಮಠ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೊಸಹಳ್ಳಿಯ ಪಡವಲ ಮಠದಿಂದ ಶಿಷ್ಯೆ ರೇವತಿ ನಾಪತ್ತೆಯಾಗಿದ್ದಾರೆ.

ಕಳೆದ ಒಂದು ತಿಂಗಳಿಂದ ರೇವತಿ ಸುಳಿವಿಲ್ಲ ಎನ್ನಲಾಗಿದೆ.

ರೇವತಿ ಮುರುಘಾ ಮಠದಲ್ಲಿಯೇ ವಿದ್ಯಾಭ್ಯಾಸ ಮಾಡಿ, ಪಡುವಲ ಮಠದಲ್ಲಿ ಅಧಿಕಾರಿಯಾಗಿದ್ದರು. ಜಮೀನು ವಿಚಾರವಾಗಿ ಗ್ರಾಮಸ್ಥರು ಹಾಗೂ ರೇವತಿ ನಡುವೆ ಗಲಾಟೆಯಾಗಿತ್ತು ಎನ್ನಲಾಗಿದೆ. ಈಗ ಒಂದು ತಿಂಗಳಿಂದ ರೇವತಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.


Spread the love

By admin