ರಾಯಚೂರು: ಜೆಡಿಎಸ್ ನಲ್ಲಿ ಹಾಸನ ಟಿಕೆಟ್ ಗಾಗಿ ಭವಾನಿ ರೇವಣ್ಣ ಪಟ್ಟು ಹಿಡಿದಿರುವ ಬೆನ್ನಲ್ಲೇ ಒತ್ತಡಗಳು ಹೆಚ್ಚುತ್ತಿದ್ದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದಂಪತಿ ಗುರುರಾಯರ ಮೊರೆ ಹೋಗಿದ್ದು, ಮಂತ್ರಾಲಯಯಕ್ಕೆ ಭೇಟಿ ನೀಡಿ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ, ಎಲ್ಲವನ್ನೂ ಗುರುರಾಯರಿಗೆ ಬಿಟ್ಟಿದ್ದೇನೆ. ನನ್ನ ಜೀವನದಲ್ಲಿ ಏನಾದರೂ ಒಳ್ಳೆಯದಾಗಿದೆ ಅಂದರೆ ಅದು ರಾಯರ ಆಶಿರ್ವಾದದಿಂದ. ಹಾಗಾಗಿ ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ.ರಾಯರ ಇಚ್ಛೆಯಂತೆ ಎಲ್ಲವೂ ನಡೆಯಲಿ ಎಂದಷ್ಟೇ ಕೇಳಿಕೊಂಡಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಪತ್ನಿ ಮಾತಿಗೆ ಧ್ವನಿಗೂಡಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಅವರು ಮೊದಲಿನಿಂದಲೂ ರಾಯರ ಭಕ್ತರು. ಎಲ್ಲವೂ ರಾಯರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ರಾಯರ ದರ್ಶನಕ್ಕಾಗಿ ಬಂದಿದ್ದೆವು. ಸ್ವತಂತ್ರವಾಗಿ ಸರ್ಕಾರ ರಚಿಸಲು ಶಕ್ತಿ ನೀಡುವಂತೆ ಪ್ರಾರ್ಥಿಸಿದ್ದೇನೆ. ಪ್ರಾರ್ಥನೆ ಈಡೇರಲಿದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.