ಶಾರುಖ್ ಖಾನ್ ನಟನೆಯ ‘ಪಠಾಣ್’ ಸೂಪರ್ಹಿಟ್ ಆದ ಬೆನ್ನಲ್ಲೇ ನಟಿ ಕಂಗನಾ ರಣಾವತ್, ತಮ್ಮ ಟ್ವಿಟರ್ ಮೂಲಕ ಇದರ ಬಗ್ಗೆ ಕಿಡಿ ಕಾರಿದ್ದರು. “ಈ ದೇಶವು ಎಲ್ಲಾ ಖಾನ್‌ಗಳನ್ನು ಮಾತ್ರ ಹಾಗೂ ಕೆಲವೊಮ್ಮೆ ಮಾತ್ರ, ಕೇವಲ ಖಾನ್‌ಗಳನ್ನು ಮಾತ್ರ ಪ್ರೀತಿಸುತ್ತದೆ…
ಮುಸ್ಲಿಂ ನಟಿಯರ ಮೇಲೆ ಗೀಳನ್ನು ಹೊಂದಿದೆ” ಎಂದು ಕಂಗನಾ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಉರ್ಫಿ ಮತ್ತು ಕಂಗನಾ ನಡುವೆ ಟ್ವೀಟ್ ವಾರ್ ಶುರುವಾಗಿದೆ.
ಕಂಗನಾ ಟ್ವೀಟ್ಗೆ ಉರ್ಫಿ ಜಾವೇದ್ ಅವರು ತಿರುಗೇಟು ನೀಡಿದ್ದು, “ಓಹ್. ಮುಸ್ಲಿಂ ನಟ, ಹಿಂದು ನಟ ಅಂತ ಏನು ವಿಂಗಡಣೆ? ಧರ್ಮದಿಂದ ಕಲೆ ವಿಭಾಗವಾಗಿಲ್ಲ. ಕಲಾವಿದರು ಮಾತ್ರ ಇರುತ್ತಾರೆ” ಎಂದಿದ್ದಾರೆ.
ಇದಕ್ಕೆ ಕಂಗನಾ ಪುನಃ ರಿಪ್ಲೈ ಮಾಡಿದ್ದು, “ಹೌದು ಮೈ ಡಿಯರ್ ಉರ್ಫಿ. ನಮ್ಮಲ್ಲಿ ಏಕರೂಪ ನಾಗರಿಕ ಸಂಹಿತೆ ಬರುವವರೆಗೂ ಆದರ್ಶ ಜಗತ್ತು ನಿರ್ಮಾಣ ಸಾಧ್ಯವಿಲ್ಲ. ಈ ರಾಷ್ಟ್ರವು ಇಲ್ಲಿಯವರೆಗೂ ಸಂವಿಧಾನದ ಮೂಲಕವೇ ವಿಭಜನೆಯಾಗಿದೆ. ಏಕರೂಪ ನಾಗರಿಕ ಸಂಹಿತೆ ಬರದಿದ್ದರೆ ವಿಭಜನೆ ಮುಂದುವರೆಯುತ್ತದೆ. ನಾವೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರ 2024ರ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಸೇರಿಸಲು ಒತ್ತಾಯಿಸೋಣ” ಎಂದಿದ್ದಾರೆ.
ಇಷ್ಟಕ್ಕೆ ಸುಮ್ಮನಾಗಲಿಲ್ಲ. ಉರ್ಫಿ ಪುನಃ ಟ್ವೀಟ್ ಮಾಡಿದ್ದು, “ಏಕರೂಪ ಬಟ್ಟೆಯು ನನಗೆ ಕೆಟ್ಟ ಐಡಿಯಾವಾಗಿದೆ. ನನ್ನ ಬಟ್ಟೆಗಳಿಂದಲೇ ನಾನು ಜನಪ್ರಿಯಳು” ಎಂದು ತಿರುಗೇಟು ಕೊಟ್ಟಿದ್ದಾರೆ.