Spread the love

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯ ತಂದಿರುವ ರಾಜ್ಯ ಸರ್ಕಾರ ವಾರಕ್ಕೆ ಒಂದು ದಿನ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡಲು ಆದೇಶಿಸಿತ್ತು. ಮಕ್ಕಳು ಏನನ್ನು ಬಯಸುತ್ತಾರೋ ಅದನ್ನೇ ನೀಡಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು.

ಅಲ್ಲದೆ ಸಮೀಕ್ಷೆ ಒಂದರಲ್ಲಿ ಶೇಕಡ 70ಕ್ಕೂ ಅಧಿಕ ಮಕ್ಕಳು ಮೊಟ್ಟೆ ನೀಡಲು ಬೇಡಿಕೆ ಇಟ್ಟಿದ್ದು, ಕಂಡುಬಂದಿತ್ತು.

ಇದರ ಮಧ್ಯೆ ಆಡಳಿತ ಸುಧಾರಣಾ ಆಯೋಗ ಮತ್ತೊಂದು ಮಹತ್ವದ ಶಿಫಾರಸ್ಸು ಮಾಡಿದ್ದು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ವಾರಕ್ಕೆ 5 ದಿನ ಮೊಟ್ಟೆ ನೀಡುವಂತೆ ತಿಳಿಸಲಾಗಿದೆ.

ಶುಕ್ರವಾರದಂದು ಟಿ.ಎಂ. ವಿಜಯ ಭಾಸ್ಕರ್ ಅವರು ಈ ಶಿಫಾರಸ್ಸನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದ್ದು, ಸಾಮಾನ್ಯ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ನೀಡಬಹುದು ಎಂದು ತಿಳಿಸಿದೆ. ಪ್ರಸ್ತುತ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಾರಕ್ಕೆ ಎರಡು ಮೊಟ್ಟೆ ನೀಡಲಾಗುತ್ತಿದ್ದು, ಇದನ್ನು ಐದು ಮೊಟ್ಟೆಗೆ ಹೆಚ್ಚಿಸಲು ಸಲಹೆ ನೀಡಲಾಗಿದೆ.


Spread the love

By admin