Spread the love

ನೀರಾವರಿ ಯೋಜನೆಗಳಿಗೆ ಮತ್ತಷ್ಟು ವೇಗ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಜಲ ಸಂಪನ್ಮೂಲ ಇಲಾಖೆಯಲ್ಲಿ 400 ಇಂಜಿನಿಯರ್ ಗಳನ್ನು ನೇರ ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆದಿದೆ.

ಜಲಸಂಪನ್ಮೂಲ ಇಲಾಖೆಯಲ್ಲಿ 1,000 ಇಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಈವರೆಗೆ ನೇಮಕಾತಿಯಾಗದ ಕಾರಣ ಯೋಜನೆಗಳ ಕಾಮಗಾರಿಗೆ ವಿಳಂಬವಾಗಿತ್ತು.

 

ಈ ಹಿನ್ನಲೆಯಲ್ಲಿ ಇಲಾಖೆ ವತಿಯಿಂದ 500 ಇಂಜಿನಿಯರ್ ಗಳ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪೈಕಿ 100 ಅಸಿಸ್ಟೆಂಟ್ ಹಾಗೂ 300 ಜೂನಿಯರ್ ಇಂಜಿನಿಯರ್ ಸೇರಿ ಒಟ್ಟು 400 ಇಂಜಿನಿಯರ್ ಗಳ ನೇಮಕಕ್ಕೆ ಈಗ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ.

ಮೀಸಲು ಹಾಗೂ ಮೆರಿಟ್ ಆಧರಿಸಿ ಈ ನೇಮಕಾತಿ ನಡೆಯಲಿದ್ದು, ಯಾವುದೇ ಸಂದರ್ಶನ ಇರುವುದಿಲ್ಲ ಎಂದು ತಿಳಿದುಬಂದಿದೆ. 400 ಇಂಜಿನಿಯರ್ ಗಳ ನೇರ ನೇಮಕಕ್ಕೆ ಇನ್ನೆರಡು ದಿನಗಳಲ್ಲಿ ಅಧಿಸೂಚನೆ ಹೊರ ಬೀಳಲಿದ್ದು, ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.


Spread the love

By admin