Spread the love

ಹೈದರಾಬಾದ್: ಎನ್ ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ಹೈದರಾಬಾದ್ ನಲ್ಲಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.

ಅಬ್ದುಲ್ ಜಾಹೀದ್ ಸೇರಿದಂತೆ ಮೂವರು ಶಂಕಿತ ಉಗ್ರರನ್ನು ಬಂಧಿಸಿರುವ ಎನ್ ಐ ಎ ಅಧಿಕಾರಿಗಳು, ಬಂಧಿತರಿಂದ ಹ್ಯಾಂಡ್ ಗ್ರೆನೇಡ್, ಮೊಬೈಲ್ ಹಾಗೂ 3ಲಕ್ಷಕ್ಕೂ ಅಧಿಕ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 

ಶಂಕಿತ ಉಗ್ರರು ಹೈದರಾಬಾದ್ ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಬಂಧಿತರ ವಿರುದ್ಧ ಯುಎಪಿಎ ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಲಾಗಿದೆ.

ಬಂಧಿತ ಅಬ್ದುಲ್ ಜಾಹೇದ್ 2005ರಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ. ಆದರೆ ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ 2017ರಲ್ಲಿ ಬಿಡುಗಡೆಯಾಗಿದ್ದ. ಈಗ ಮತ್ತೆ ತನ್ನ ಗ್ಯಾಂಗ್ ನೊಂದಿಗೆ ಜಾಹೇದ್ ಮತ್ತೆ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದೆ


Spread the love

By admin