Spread the love

ಉಕ್ರೇನ್: ರಷ್ಯಾ ಮತ್ತು ಉಕ್ರೇನ್ ಯುದ್ಧ ಆರಂಭವಾಗಿ ಒಂದು ವರ್ಷ ಕಳೆದಿದೆ. ಇದೀಗ ಇವೆರಡೂ ರಾಷ್ಟ್ರಗಳು ಯುದ್ಧ ಖೈದಿಗಳನ್ನು ವಿನಿಮಯ ಮಾಡಿಕೊಂಡಿವೆ.ಉಭಯ ದೇಶಗಳ ಸೈನಿಕರು ಮನೆಗೆ ಮರಳಿರುವುದಾಗಿ ಎರಡೂ ಕಡೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಉಕ್ರೇನ್​ ಅಧ್ಯಕ್ಷರ ಕಚೇರಿ ಮುಖ್ಯಸ್ಥ ಆಂಡ್ರಿ ಯೆಮಾರ್ಕ್​ ಅವರು ಟೆಲಿಗ್ರಾಮ್​ ಪೋಸ್ಟ್​ನಲ್ಲಿ 116 ಉಕ್ರೇನಿಯರು ಮನೆಗೆ ಮರಳಿದ್ದಾರೆ ಎಂದು ತಿಳಿಸಿದ್ದಾರೆ. ಬಿಡುಗಡೆಯಾದ ಯುದ್ಧ ಖೈದಿಗಳಲ್ಲಿ ಮಾಸ್ಕೋದ ಮೇಲೆ ಕೆಲ ತಿಂಗಳುಗಳ ಕಾಲ ನಡೆದ ಯುದ್ಧದಲ್ಲಿ ಮಾರಿಯುಪೋಲ್​ನಲ್ಲಿ ಸೆರೆಸಿಕ್ಕ ಉಕ್ರೇನ್ ಪಡೆಗಳು, ಖೆರ್ಸನ್​ ಪ್ರದೇಶದ ಗೆರಿಲ್ಲಾ ಹೋರಾಟಗಾರರು ಮತ್ತು ಬಖ್ಮುತ್​ನಲ್ಲಿ ಸೆರೆಹಿಡಿಯಲ್ಪಟ್ಟ ಸ್ನೈಪರ್​ಗಳು ಸೇರಿದ್ದಾರೆ. ರಷ್ಯಾಕ್ಕೆ 63 ಯುದ್ಧ ಖೈದಿಗಳು ಉಕ್ರೇನ್‌ನಿಂದ ಮರಳಿದ್ದಾರೆ ಎಂದು ರಷ್ಯಾ ಹೇಳಿದೆ. ಜನವರಿ ಆರಂಭದ ವೇಳೆಗೆ 3,000ಕ್ಕೂ ಹೆಚ್ಚು ಉಕ್ರೇನಿಯನ್​ ಸೈನಿಕರು ರಷ್ಯಾದ ಸೆರೆಯಲ್ಲಿ ಉಳಿದಿದ್ದರು.


Spread the love

By admin