Spread the love

ರೈಲು ಸಂಚಾರದಲ್ಲಿ ಹಲವು ಸುಧಾರಣೆಗಳನ್ನು ತರುತ್ತಿರುವ ರೈಲ್ವೆ ಇಲಾಖೆ ಇದೀಗ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. ಪ್ರಯಾಣಿಕರಿಗೆ ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕವೂ ಫುಡ್ ಆರ್ಡರ್ ಮಾಡುವ ಅವಕಾಶ ಸಿಗುತ್ತಿದ್ದು, ಪ್ರಸ್ತುತ ಇದನ್ನು ಕೆಲವು ರೈಲುಗಳಲ್ಲಿ ಮಾತ್ರ ಪರಿಚಯಿಸಲಾಗಿದೆ.

 

ಪ್ರಯಾಣಿಕರು ಫುಡ್ ಆರ್ಡರ್ ಮಾಡಲು ವಾಟ್ಸಾಪ್ ಸಂಖ್ಯೆ 8750001323 ಪರಿಚಯಿಸಿದ್ದು, ಪ್ರಯಾಣಿಕರ ಪತ್ರಿಕ್ರಿಯೆ ನೋಡಿದ ಬಳಿಕ ಇತರೆ ರೈಲು ಮಾರ್ಗಗಳಲ್ಲೂ ಇದನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ತಿಳಿದುಬಂದಿದೆ.

ಪ್ರಯಾಣಿಕರು ಕ್ಯಾಟರಿಂಗ್ ಸೇವೆ ಪಡೆಯಲು ಈಗಾಗಲೇ catering.irctc.co.in ವೆಬ್ಸೈಟ್ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ವಾಟ್ಸಾಪ್ ಮೂಲಕವೂ ಫುಡ್ ಆರ್ಡರ್ ಮಾಡುವ ಅವಕಾಶ ಸಿಗಲಿದೆ. ಪ್ರಯಾಣಿಕರು ಆರ್ಡರ್ ಮಾಡಿದ ಬಳಿಕ ಸಮೀಪದ ಕೆಟರಿಂಗ್ ನಿಂದ ಪ್ರಯಾಣಿಕರಿಗೆ ಆಹಾರ ಸರಬರಾಜು ಮಾಡಲಾಗುತ್ತದೆ.


Spread the love

By admin