Spread the love

ಸಂಬಂಧಿಯೊಂದಿಗಿನ ಜಗಳದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದ್ದಕ್ಕೆ ವ್ಯಕ್ತಿ ಮನನೊಂದು ಪೊಲೀಸ್ ಠಾಣೆಯೊಳಗೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಶ್ರೀ ಪಾಲ್ ಎಂಬ ಯುವಕ ತನ್ನ ಸೋದರ ಸಂಬಂಧಿಯೊಂದಿಗೆ ಜಗಳವಾಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದು, ನಂತರ ಬದೌನ್‌ನ ಪೊಲೀಸ್ ಠಾಣೆಯೊಳಗೆ ಬೆಂಕಿ ಹಚ್ಚಿಕೊಂಡಿದ್ದಾನೆ.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

ಸುಮಾರು ಶೇಕಡಾ 80 ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಶ್ರೀ ಪಾಲ್ ಅವರ ಸಹೋದರ ಕುನ್ವರ್ ಪಾಲ್ ಮಾತನಾಡುತ್ತಾ, “ಪೊಲೀಸರು ನನ್ನ ಸಹೋದರನನ್ನು ಮೊದಲು ಹೊಡೆದಿದ್ದರು ಮತ್ತು ಅವನನ್ನು ಬಿಡುಗಡೆ ಮಾಡಲು ನಮ್ಮಿಂದ ಹಣ ಪಡೆದಿದ್ದರು. ಅವರು ನಿರಂತರವಾಗಿ ನಮಗೆ ಚಿತ್ರಹಿಂಸೆ ನೀಡುತ್ತಿದ್ದರು ಮತ್ತು ಹೆಚ್ಚಿನ ಹಣಕ್ಕಾಗಿ ಒತ್ತಾಯಿಸುತ್ತಿದ್ದರು. ನಾನು ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿಯಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ಸಹೋದರನ ಸ್ಥಿತಿಗೆ ಕಾರಣರಾದ ಸ್ಥಳೀಯ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಂದು ಒತ್ತಾಯಿಸಿದ್ದಾರೆ.

ಎರಡೂ ಕಡೆಯವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ, ಪೊಲೀಸರು ಶ್ರೀ ಪಾಲ್ ವಿರುದ್ಧ ಕಠಿಣ ಸೆಕ್ಷನ್‌ಗಳನ್ನು ಹಾಕಿದ್ದಾರೆಂದು ಕುನ್ವರ್ ಪಾಲ್ ಆರೋಪಿಸಿದ್ದಾರೆ.

ಸೋಮವಾರ ಸಂಜೆ ಶ್ರೀ ಪಾಲ್ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಸಹಸ್ವಾನ್ ಪೊಲೀಸ್ ಠಾಣೆಗೆ ಪ್ರವೇಶಿಸಿ ಪೊಲೀಸರು ಉದ್ದೇಶಪೂರ್ವಕವಾಗಿ ತನ್ನನ್ನು ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆಂದು ಕೂಗುತ್ತಾ ಬೆಂಕಿ ಹಚ್ಚಿಕೊಂಡಿದ್ದರು.


Spread the love

By admin