Spread the love

ರಣಿ ಸರಗಳ್ಳರನ್ನು ಹಿಡಿಯಲು ಮುಂಬೈ ಪೊಲೀಸರು ಮಾಡಿದ ಪ್ಲಾನ್ ಸಿನಿಮಾ ದೃಶ್ಯವನ್ನೂ ಮೀರಿಸುತ್ತೆ. ಪೊಲೀಸರ ಕಾರ್ಯಾಚರಣೆಯಲ್ಲಿ ಫೆಬ್ರವರಿ 4, ಶನಿವಾರದಂದು ಅಂಬಿವಲಿಯಲ್ಲಿ ಇಬ್ಬರು ಆಪಾದಿತ ಸರಗಳ್ಳರನ್ನು ಸೆರೆಹಿಡಿಯಲು ವಲಯ XI ರ ಮುಂಬೈ ಪೊಲೀಸ್ ಅಧಿಕಾರಿಗಳು ಆಂಬ್ಯುಲೆನ್ಸ್ ನಲ್ಲಿ ವೈದ್ಯರು ಮತ್ತು ರೋಗಿಗಳಂತೆ ವೇಷ ಧರಿಸಿದ್ದರು.

 

ಕೆಲವೇ ನಿಮಿಷಗಳಲ್ಲಿ, 26 ಜನರಿದ್ದ ಪೊಲೀಸ್ ತಂಡವು ಇಬ್ಬರು ಆರೋಪಿಗಳನ್ನ ಹಿಡಿದಿದೆ. ಸಿಕ್ಕಿಹಾಕಿಕೊಂಡ ಕಳ್ಳರಲ್ಲಿ ಒಬ್ಬನನ್ನು ಸಯ್ಯದ್ ಜಾಕೀರ್ ಅಲಿಯಾಸ್ ಸಂಗ ಎಂದು ಗುರುತಿಸಲಾಗಿದೆ.

ಜಾಕೀರ್ ಇರಾನಿ ಗ್ಯಾಂಗ್ ನ ದರೋಡೆಕೋರರಾಗಿದ್ದು, ಅವನ ವಿರುದ್ಧ 27 ಸರ ಕಳ್ಳತನ ಮತ್ತು ವಂಚನೆ ಪ್ರಕರಣಗಳು ದಾಖಲಾಗಿವೆ. ಹಲವಾರು ಸಿಸಿ ಕ್ಯಾಮೆರಾ ಫೂಟೇಜ್ ಮತ್ತು MHB ಕಾಲೋನಿ ಪೊಲೀಸರಿಗೆ ಬಂದ ಮಾಹಿತಿಯ ಸಹಾಯದಿಂದ ಜಾಕೀರ್ ನನ್ನು ಅಂಬಿವಲಿಯಲ್ಲಿ ಪತ್ತೆ ಹಚ್ಚಲಾಗಿದೆ. ಝಾಕಿರ್‌ನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.


Spread the love

By admin