Spread the love

ವದೆಹಲಿ: ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶಿಸಲು ಮತ್ತು ನಮಾಜ್ ಸಲ್ಲಿಸುವುದರ ಮೇಲೆ ನಿಷೇಧ ಇಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(AIMPLB) ಹೇಳಿದೆ.

ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾದ ಪ್ರಮಾಣ ಪತ್ರದಲ್ಲಿ ಮಂಡಳಿಯಿಂದ ಈ ಕುರಿತಾಗಿ ವಿವರಣೆ ನೀಡಲಾಗಿದೆ ಎಂದು ಮಂಡಳಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

ಇಸ್ಲಾಂ ಧರ್ಮ ಗ್ರಂಥದಲ್ಲಿ ಇದನ್ನು ಹೇಳಲಾಗಿದೆ. ತನ್ನ ಅಭಿಪ್ರಾಯ ಕೂಡ ಇದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ. ಮುಸ್ಲಿಂ ಮಹಿಳೆಯರಿಗೆ ಮಸೀದಿಗಳಿಗೆ ಪ್ರವೇಶ ನೀಡಿ, ನಮಾಜ್ ಸಲ್ಲಿಸಲು ಅವಕಾಶ ಕಲ್ಪಿಸಲು ಅವಕಾಶ ನೀಡುವ ಬಗ್ಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಮಂಡಳಿಯ ವತಿಯಿಂದ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಲಾಗಿದ್ದು, ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶಿಸಿ ನಮಾಜ್ ಸಲ್ಲಿಸಲು ನಿಷೇಧ ಇಲ್ಲ ಎಂದು ತಿಳಿಸಲಾಗಿದೆ.


Spread the love

By admin