Spread the love

ಬೆಳಗಾವಿ: ಹಾಸನ ಜೆಡಿಎಸ್ ಟಿಕೆಟ್ ಗಾಗಿ ಭಾರಿ ಪೈಪೋಟಿ ನಡೆಸಿದ್ದ ಭವಾನಿ ರೇವಣ್ಣ ಅವರಿಗೆ ನೇರವಾಗಿಯೇ ಟಿಕೆಟ್ ನಿರಾಕರಿಸಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇದೀಗ ಮತ್ತೆ ಸಧ್ಯಕ್ಕೆ ಹಾಸನ ರಾಜಕೀಯಕ್ಕೆ ಅವರು ಅನಿವಾರ್ಯವಲ್ಲ ಎಂದು ಹೇಳಿದ್ದಾರೆ.

 

ಬೆಳಗಾವಿಯಲ್ಲಿ ಪಂಚರತ್ನ ರಥಯಾತ್ರೆಗೆ ಸಿದ್ಧತೆ ನಡೆಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಪಕ್ಷದ ಚೌಕಟ್ಟಿನಲ್ಲಿ ನಡೆದ ಚರ್ಚೆ ಪ್ರಕಾರ ಹೆಚ್.ಡಿ.ರೇವಣ್ಣ ಅವರನ್ನು ಹೊಳೆನರಸಿಪುರ ಹಾಗೂ ಹಾಸನ ಎರಡೂ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಗೆಲ್ಲುವ ಅಭ್ಯರ್ಥಿಯ ಶೋಧದಲ್ಲಿ ಇದ್ದೇವೆ ಎಂದರು.

ಹಾಸನದಲ್ಲಿ ಅಭ್ಯರ್ಥಿ ಯಾರು ಎನ್ನುವುದನ್ನು ಪಕ್ಷದ ವೇದಿಕೆಯಲ್ಲಿಯೇ ತೀರ್ಮಾನಿಸಲಾಗುವುದು. ಹಾಸನ ರಾಜಕೀಯದಲ್ಲಿ ಭವಾನಿ ರೇವಣ್ಣ ಅನಿವಾರ್ಯ ಅಲ್ಲ ಎಂದು ಹೇಳಿದರು


Spread the love

By admin