Spread the love

ಮೈಸೂರು: ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಮೈಸೂರು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಮೈಸೂರಿನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಇರಾನ್ ಯುವತಿ ಆರೋಪಿಸಿದ್ದರು. ಈಗಾಗಲೇ ವಂಚನೆ ಆರೋಪ ಪ್ರಕರಣದಲ್ಲಿ ಆದಿಲ್ ಜೈಲು ಪಾಲಾಗಿದ್ದಾರೆ.

ಆದಿಲ್ ಖಾನ್ ವಿರುದ್ಧ ರಾಖಿ ಸಾವಂತ್ ವಂಚನೆ ಆರೋಪ ಮಾಡಿದ್ದರು. ರಾಖಿ ಸಾವಂತ್ ನೀಡಿದ ವಂಚನೆ ದೂರು ಪ್ರಕರಣದಲ್ಲಿ ಆದಿಲ್ ಖಾನ್ ಜೈಲು ಪಾಲಾಗಿದ್ದಾರೆ.

ಇದೀಗ ಆದಿಲ್ ಖಾನ್ ದುರಾನಿ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ. ಮೈಸೂರಿನ ವಿವಿ ಪುರಂ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಅಡಿ ಎಫ್‌ಐಆರ್ ದಾಖಲಿಸಲಾಗಿದೆ.


Spread the love

By admin