Spread the love

ವಿನಯ್ ರತ್ನ ಸಿದ್ದಿ ಅಭಿನಯಸಿ ನಿರ್ದೇಶಿಸಿರುವ , ರತ್ನ ಸಿದ್ದಿ ಫಿಲ್ಮ್ಸ್ ರವರ, ಚಂದ್ರಣ್ಣ ಮತ್ತು ಅಮರೆಂದ್ರ ವರದ ನಿರ್ಮಾಣದ, ವೈಷ್ಣವಿ, ಶಕುಂತಲಾ, ಸುಶ್ಮಿತಾ, ಕಾವೇರಿ, ಪ್ರಿಯಾಂಕ ಮತ್ತು ಶ್ರೀ ಮುಖ್ಯ ತಾರಾಗಣದಲ್ಲಿ ಇದ್ದು

ಚಂದ್ರಪ್ರಭ, ಲೋಕೇಶ್ ರಾಜಣ್ಣ, ಉಮೇಶ್ ಕಿನ್ನಲ್, ಶಿವಮೊಗ್ಗ ರಾಮಣ್ಣ ಮತ್ತಿತರರು ಅಭಿನಯಿಸಿದ್ದು, ಅತಿಥಿ ಪಾತ್ರದಲ್ಲಿ ಯೂನಿವರ್ಸಲ್ ಸ್ಟಾರ್ ವಿನಯ್ ಕುಮಾರ್ ವಿ ನಾಯಕ್ ಕಾಣಿಸಿಕೊಂಡಿರುವ ಚಲನಚಿತ್ರವಾದ “ಪ್ರೇಮಂ 2” ಚಲನಚಿತ್ರದ ಮೊದಲನೇ ಹಾಡು ಇದೆ

ತಿಂಗಳು ಅಂದರೆ ದಿನಾಂಕ 11-02-2023 ರಂದು, ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ ಮೇಲುಕೋಟೆಯ ಎಸ್.ಈ.ಟಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನಲ್ಲಿ ಸಂಜೆಯ ಸಮಯ ಬಿಡುಗಡೆಯಾಗಲಿದ್ದು, ಚಲನಚಿತ್ರವು ಈಗಾಗಲೇ ಬಿರುಗಾಳಿ ಎಬ್ಬಿಸಿದ್ದು, ಚಲನಚಿತ್ರ ಸಾಮ್ರಾಜ್ಯದಲ್ಲಿ ಭಾರಿ ಬೇಡಿಕೆ ಮತ್ತು ಕುತೂಹಲವನ್ನುಂಟು ಮಾಡಿದೆ.

ಹಾಡನ್ನು ರಾಧಾ ರವರು ಹಾಡಿದ್ದು, ಸಂಗೀತವನ್ನು ಅಜಯ್ ಎಸ್.ಎಂ ರವರು ನೀಡಿದ್ದಾರೆ.

ಮುಂದುವರಿದಂತೆ, ಡಿ.ಒ.ಪಿ ಆನಂದ್ ಇಳಯರಾಜ, ಅರುಣ್ ಮತ್ತು ಮನು ಮಾಡಿದ್ದು ಇದಕ್ಕೆ ಪೂರಕವಾಗಿ ಡ್ರೋನ್ ಅನ್ನು ಮನು ಬಳಸಿದ್ದಾರೆ.

ಉಳಿದಂತೆ ಶಬ್ದ ವಿನ್ಯಾಸವನ್ನು ನಾಗರಾಜ್ ಹುಲಿವನ್, ವಿ.ಎಫ್.ಎಕ್ಸ್ ಅನ್ನು ಐಯೇಶಾನ್, ಸಂಕಲವನ್ನು ವಿನಯ್ ರವರು ಮಾಡಿದ್ದು ಚಲನಚಿತ್ರದ ಕಲರಿಸ್ಟ್ ಗೌತಮ್ ನಾಯಕ್ ರವರಾಗಿದ್ದಾರೆ.

 


Spread the love