Spread the love

ಕರ್ನಾಟಕ ರಾಜ್ಯದ, ಬೆಂಗಳೂರು ನಗರದ, ಲಿಂಗರಾಜಪೂರ- ಕಮ್ಮನಹಳ್ಳಿ ಸಮೀಪದ ಹೆಣ್ಣೂರು ಮುಖ್ಯ ರಸ್ತೆ, ಕಾಚರಕನಹಳ್ಳಿಯ ವಿಶೇಷ ಶಾಲೆ “ಜಿ.ಆರ್.ಟಿ ಸ್ಪೆಷಲ್ ಸ್ಕೂಲ್”. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲರೂ ವಿಶೇಷ ಮಕ್ಕಳು, ಇಲ್ಲಿನ ಮಕ್ಕಳು ನಮ್ಮ ನಿಮ್ಮ ಸಾಧಾರಣ ಮಕ್ಕಳಂತೆ ನಡೆಯಲಾರರು, ನೋಡಲಾರರು, ಕೇಳರಾರರು, ಮಾತನಾಡಲಾರರು, ಕೂರರು ಮತ್ತು ಚಿಂತಿಸಲಾರರು.

ಈ ಕಾಲದಲ್ಲಿ ಚಲನಚಿತ್ರ ಅಂದ ತಕ್ಷಣ ಎಷ್ಟೋ ನಿರ್ಮಾಪಕರ, ನಟರ ಹಾಗೂ ಕಲಾವಿದರ ಅಂತರಂಗ ಆಕಾಶದ ಮಟ್ಟ ದಾಟಿ ಇರುತ್ತೆ. ನಮ್ಮ ಚಿತ್ರದ ಪೋಸ್ಟರ್ ಅನ್ನು ದೊಡ್ಡ ದೊಡ್ಡ ನಟರು, ನಿರ್ಮಾಪಕರು, ನಿರ್ದೇಶಕರು ಮುಂತಾದವರು ಬಿಡುಗಡೆ ಮಾಡಬೇಕು ಅಂತ ಯೋಚಿಸುತ್ತಾರೆ

ಮತ್ತು ಬಹುಪಾಲು ಜನರು ಹಾಗೆಯೂ ಕೂಡ ಮಾಡುತ್ತಾರೆ, ಅಂತಹದರಲ್ಲಿ ದಿನಾಂಕ 10-02-2023, ಗುರುವಾರ ಮದ್ಯಾಹ್ನ ಸರಿ ಸುಮಾರು 3:00 ಗಂಟೆಗೆ, “ನಾನು ಯಾರು”, ಕಿರು ಚಿತ್ರದ ನಿರ್ಮಾಣ ಸೇರಿದಂತೆ, ಕಥೆ ವಿಸ್ತಾರ, ಚಿತ್ರಕಥೆ, ಸಂಭಾಷಣೆ ಮತ್ತು ಸಂಗೀತ ನೀಡಿರುವ, ಮನೋವಿಜ್ಞಾನಿ, ಪತ್ರಕರ್ತ, ಲೇಖಕ, ಬರಹಗಾರ ಇತ್ಯಾದಿ ಆಗಿರುವ, “ಯೂನಿವರ್ಸಲ್ ಸ್ಟಾರ್”, “ವಿನಯ್ ಕುಮಾರ್ ವಿ ನಾಯಕ್” ರವರ ಆಶಯದಂತೆ “ನಾನು ಯಾರು” ಕನ್ನಡ ಕಿರು ಚಿತ್ರದ ಪೋಸ್ಟರ್, “ಜಿ.ಆರ್.ಟಿ ಸ್ಪೆಷಲ್ ಸ್ಕೂಲ್” ನಲ್ಲಿ ವಿಶೇಷ ಚೇತನರು ಮತ್ತು ವಿಶೇಷ ಮಕ್ಕಳ ಜೊತೆಗೆ, ಶಾಲೆಯ ಸಿಬ್ಬಂದಿ ವರ್ಗದವರು ಶುಭ ಹಾರೈಸಿ ಪೋಸ್ಟರ್ ಬಿಡುಗಡೆ ಮಾಡಿದ್ದಾರೆಂದು “ಮಹಾನಾಯಕ ಅಂಬೇಡ್ಕರ್ ಸೇವಾ ಸಮಿತಿ”ಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ. ಹರೀಶ್ ಬಾಬು. ಎಂ ರವರು ಮಾಧ್ಯಮಗಳಿಗೆ ತಿಳಿಸಿವುದರ ಜೊತೆಗೆ, ಚಿತ್ರಕ್ಕೆ ಶ್ರೀ. ಸತೀಶ್ ರೆಡ್ಡಿ ಕೆ.ಟಿ ಕನಕಪುರ ರವರು ನಿರ್ದೇಶಕರಾಗಿದ್ದು, ಶ್ರೀ. ಕ್ರಿಸ್ ರವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ

ಶ್ರೀ. ನಾಗೇಶ್ ಕೌಂಡಿನ್ಯ ರವರು ಮೂಲ ಕಥೆ ಬರೆದಿದ್ದಾರೆ, ಶ್ರೀ. ರಮೇಶ್ ಬಾಬು. ಕೆ ರವರ ಪ್ರಸಾದನವಿದ್ದು ತಂದೆಯ ಪಾತ್ರದಲ್ಲಿ “ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ”ಯ ರಾಜ್ಯ ಪ್ರಶಸ್ತಿ ಪುರಸ್ಕೃತರಾದ “ಶ್ರೀಯುತ. ಗುಣಶೀಲನ್ ಎಂ. ಎಸ್” ರವರು ಬಹಳ ಅದ್ಬುತವಾಗಿ ಕಾಣಿಸಿಕೊಂಡಿದ್ದಾರೆ, ಮಲ ತಾಯಿ ಪಾತ್ರಕ್ಕಂತು ಸು. ಶ್ರೀ. ಗೀತಾ ನ್ಯಾಯ ಒದಗಿಸಿರುವುದು ಎದ್ದು ಕಾಣುತ್ತದೆ

ಸಂಗೀತವಂತು ಬಹಳ ಚೆನ್ನಾಗಿ ಮೂಡಿಬಂದಿದೆ, ಎಲ್ಲರೂ ತಮ್ಮ ತಮ್ಮ ಕರ್ತವ್ಯ ಮತ್ತು ಪಾತ್ರಗಳನ್ನು ಚೆನ್ನಾಗಿ ಮಾಡಿದ್ದಾರೆ ಅನ್ನೋ ದೃಢ ನಂಬಿಕೆಯಿದೆ. ಹಾಗಾಗಿ, ಚಿತ್ರ ತಂಡಕ್ಕೆ, ಚಿತ್ರಕ್ಕೆ ಮತ್ತು ಎಲ್ಲಾ ಕನ್ನಡ ಚಿತ್ರಗಳಿಗೆ ಹೆಚ್ಚಿನ ಯಶಸ್ಸು ಸಿಗಲೆಂದು ಆಶಿಸಿಸುತ್ತೇನೆಂದು ತಿಳಿಸಿದ್ದಾರೆ.

ಇದೆ ವೇಳೆ, ಕಾರ್ಯಕ್ರಮದಲ್ಲಿ ಶ್ರೀ. ಹರೀಶ್ ಬಾಬು. ಎಂ, ಶ್ರೀ. ಸಜ್ಜು, ಶ್ರೀ. ಕ್ರಿಸ್, ಸು. ಶ್ರೀ. ಗೀತಾ ಸೇರಿದಂತೆ “ಯೂನಿವರ್ಸಲ್ ಸ್ಟಾರ್” ವಿನಯ್ ಕುಮಾರ್ ವಿ ನಾಯಕ್ ರವರನ್ನು ಕೂಡ ಕಾಣಬಹುದಾಗಿದೆ.

 

 


Spread the love

By admin