Spread the love

ಬೆಂಗಳೂರು: ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಮೆಟ್ರೋ ಟ್ರ್ಯಾಕ್ ಗೆ ಇಬ್ಬರು ಇಳಿದ ಘಟನೆ ಕುವೆಂಪು ಮೆಟ್ರೋ ಸ್ಟೇಷನ್ ನಲ್ಲಿ ನಡೆದಿದೆ.

ಅವರು ಟ್ರ್ಯಾಕ್ ಗೆ ಇಳಿದಿದ್ದ ವೇಳೆ ಯಾವುದೇ ರೈಲು ಸಂಚರಿಸುತ್ತಿರಲಿಲ್ಲ. ಯಾವುದೇ ಮೆಟ್ರೋ ರೈಲು ಸಂಚರಿಸದ ಕಾರಣ ಅನಾಹುತ ತಪ್ಪಿದೆ.

ಟ್ರ್ಯಾಕ್ ಗೆ ಇಳಿದಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ರೈಲ್ವೆ ಹಳಿಯ ರೀತಿ ಟ್ರ್ಯಾಕ್ ದಾಟಲು ಹೋಗಿದ್ದೆವೆಂದು ಇಬ್ಬರು ಮಾಹಿತಿ ನೀಡಿದ್ದಾರೆ. ಬಿಎಂಆರ್‌ಸಿಎಲ್ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸಿದ ವೇಳೆ ಇಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


Spread the love

By admin