Spread the love

ಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗಿದ್ದ ಮನೋಜ್ ಬಾಜ್ಪೇಯ್ ಅಭಿನಯದ ‘ದಿ ಫ್ಯಾಮಿಲಿ ಮ್ಯಾನ್’ ನ ಎರಡು ಸರಣಿಗಳು ವೀಕ್ಷಕರು ಮನ ಗೆದ್ದಿದ್ದವು. ಮೊದಲ ಸರಣಿ ಪಾಕ್ ಭಯೋತ್ಪಾದಕರ ಕುರಿತಾಗಿದ್ದರೆ, ಎರಡನೇ ಸರಣಿ ಶ್ರೀಲಂಕಾ ಬಂಡುಕೋರರ ಕಥೆಯನ್ನು ಹೊಂದಿತ್ತು.

 

ಎರಡನೇ ಸರಣಿಯಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಕೂಡ ಅಭಿನಯಿಸಿದ್ದು, ಎಲ್ಲರ ಮನ ಗೆದ್ದಿತ್ತು. ಚಲನಚಿತ್ರದಂತೆಯೇ ಈ ಎರಡು ಸರಣಿಗಳು ಮೂಡಿಬಂದಿದ್ದು, ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆದಿತ್ತು.

ಹೀಗಾಗಿ ಮೂರನೇ ಸರಣಿ ಯಾವಾಗ ಬರಲಿದೆ ಎಂಬ ನಿರೀಕ್ಷೆಯಲ್ಲಿ ಎಲ್ಲರೂ ಇದ್ದು, ಇದೀಗ ಮನೋಜ್ ಬಾಜ್ಪೇಯ್ ಖುಷಿ ಸುದ್ದಿ ನೀಡಿದ್ದಾರೆ. ಈ ಕುರಿತಂತೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಹೋಳಿ ಹಬ್ಬಕ್ಕೆ ನಿಮ್ಮೆದುರು ನಮ್ಮ ಕುಟುಂಬದ ಜೊತೆ ಬರುತ್ತಿದ್ದೇನೆ ಎಂದು ಹೇಳಿದ್ದಾರೆ.


Spread the love