Spread the love

ಹೈದರಾಬಾದ್ ನಲ್ಲಿ ಶನಿವಾರ ಮುಕ್ತಾಯವಾದ ಭಾರತದ ಮೊದಲ ಫಾರ್ಮುಲಾ ಇ ರೇಸ್ ಕಣ್ತುಂಬಿಕೊಂಡ ನಟ ರಾಮ್ ಚರಣ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೊತೆ ಫಾರ್ಮುಲಾ ವೀಕ್ಷಿಸಿದ ಅನುಭವಕ್ಕೆ ವಾಹ್ ಎಂದಿದ್ದಾರೆ.ಶನಿವಾರ ನಡೆದ ಆಲ್-ಎಲೆಕ್ಟ್ರಿಕ್ ಫಾರ್ಮುಲಾ ಇ ಮೋಟಾರ್ ಚಾಂಪಿಯನ್‌ಶಿಪ್ ನಲ್ಲಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ರೇಸ್ ವೀಕ್ಷಿಸಲು ನಾನು “ಥ್ರಿಲ್” ಆಗಿದ್ದೇನೆ ಎಂದು ರಾಮ್ ಚರಣ್ ಹೇಳಿದ್ದಾರೆ.

 

ಈವೆಂಟ್‌ನ ಚಿತ್ರಗಳ ಸರಣಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ರಾಮ್ ಚರಣ್, “ಎಂತಹ ಅದ್ಭುತ ಓಟ. ಇಂದು ಫಾರ್ಮುಲಾ ಇ ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಮಹೀಂದ್ರಾ ರೇಸಿಂಗ್ ವೀಕ್ಷಿಸಲು ಸಾಕಷ್ಟು ರೋಮಾಂಚನಗೊಂಡೆ. ನಮ್ಮ ದೇಶ, ನಮ್ಮ ರಾಜ್ಯ ಮತ್ತು ನಮ್ಮ ಹೈದರಾಬಾದ್ ನಗರಕ್ಕೆ ಎಂತಹ ಹೆಮ್ಮೆಯ ಕ್ಷಣ ಎಂದು ಉದ್ಗರಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ನಟಿ ಶ್ರುತಿ ಹಾಸನ್, ದುಲ್ಕರ್ ಸಲ್ಮಾನ್, ನಾಗ ಚೈತನ್ಯ, ಶಿಖರ್ ಧವನ್, ಯುಜುವೇಂದ್ರ ಚಹಾಲ್, ಚಲನಚಿತ್ರ ನಿರ್ಮಾಪಕ ಅಲ್ಲು ಅರವಿಂದ್, ಆಂಧ್ರಪ್ರದೇಶ ಸಚಿವ ಜಿ ಅಮರನಾಥ್ ಮತ್ತು ಟಿಡಿಪಿ ಸಂಸದ ರಾಮಮೋಹನ್ ನಾಯ್ಡು ಕೂಡ ಭಾಗವಹಿಸಿದ್ದರು.


Spread the love

By admin