Spread the love

ವಿಮಾನ ಹತ್ತಲು ವಿಳಂಬವಾಯಿತು ಎಂದು ಭದ್ರತಾ ಸಿಬ್ಬಂದಿ‌ ಜತೆ ರಂಪಾಟ ಮಾಡಿಕೊಂಡು ವಿಮಾನ ನಿಲ್ದಾಣದಲ್ಲಿ ಬಾಂಬ್ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಸಿದ ಮಹಿಳೆಯೊಬ್ಬಳು ಜೈಲುಪಾಲಾಗಿದ್ದಾಳೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಫೆ.3 ರಂದು ಬೆಂಗಳೂರಿನಿಂದ ಕೋಲ್ಕತ್ತಾಗೆ ತೆರಳಲು ಕೇರಳ ಮೂಲದ ಮಹಿಳೆ ಏರ್​ಪೋರ್ಟ್​​ಗೆ ಆಗಮಿಸಿದ್ದರು. 6E445 ಸಂಖ್ಯೆಯ ಇಂಡಿಗೋ ವಿಮಾನದಲ್ಲಿ ಮಹಿಳೆ ಟಿಕೆಟ್ ಬುಕ್ ಮಾಡಿದ್ದರು. ಬೋರ್ಡಿಂಗ್ ಗೇಟ್ ನಂ.06ರಲ್ಲಿ ಕುಳಿತಿದ್ದ‌ ವೇಳೆ ವಿಮಾನ ಯಾನಕ್ಕೆ ವಿಳಂಭವಾಗುತ್ತಿದೆ ಅಂತಾ ಮೊದಲಿಗೆ ಏರ್​ಪೋರ್ಟ್​​ ಭದ್ರತಾ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಾಳೆ. ನಂತರ ತನ್ನನ್ನು ಬೇಗ ಬಿಡದಿದ್ದಲ್ಲಿ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾಳೆ.

11 ದಿನಗಳ‌ ಕಾಲ ನ್ಯಾಯಾಂಗ ಬಂಧನ: ಬೆದರಿಕೆ ನಂತರ ಸ್ಥಳದಲ್ಲಿದ್ದ ಪ್ರಯಾಣಿಕರಿಗೆ ಇಲ್ಲಿ ಬಾಂಬ್ ಇಟ್ಟಿದ್ದು ವಾಪಸ್ ಹೋಗುವಂತೆ ಕಿರುಚಾಡಿ ರಂಪಾಟ ಮಾಡಿದ್ದಾಳೆ. ಹೀಗಾಗಿ ಭದ್ರತಾ ಸಿಬ್ಬಂದಿ ಮಹಿಳೆಯನ್ನ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಮಹಿಳೆಯನ್ನ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿ ಕೋರ್ಟ್​ಗೆ ಹಾಜರು ಪಡಿಸಿದ್ದಾರೆ. ದೇವನಹಳ್ಳಿಯ ಜೆಎಂಎಫ್​​ಸಿ ಕೋರ್ಟ್ ಫೆ.17ರವರೆಗೂ 11 ದಿನಗಳ‌ ಕಾಲ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದೆ.


Spread the love

By admin