Spread the love

ಬೆಂಗಳೂರು: ಹೊಸ ವರ್ಷಾಚರಣೆಗೆ ನಿನ್ನೆ ರಾತ್ರಿಯಿಡೀ ರಾಜಧಾನಿ ಬೆಂಗಳೂರಿನ ಪ್ರತಿಷ್ಟಿತ ಎಂ.ಜಿ.ರಸ್ತೆ, ಬಿಗ್ರೇಡ್ ರಸ್ತೆ ಜಗಮಗಿಸುತ್ತಿತ್ತು. ಕೊರೊನಾದಿಂದಾಗಿ ಈ ಹಿಂದಿನ ಎರಡು ಹೊಸ ವರ್ಷದ ಉತ್ಸವಕ್ಕೆ ಮಂಕು ಕವಿದಿತ್ತು. ಆದರೆ, ಈ ವರ್ಷ ಜನರಲ್ಲಿ ಸಂಭ್ರಮೋಲ್ಲಾಸ ಕಂಡುಬಂತು.

ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷಾಚರಣೆಯ ಕೇಂದ್ರ ಸ್ಥಳಗಳೆಂದರೆ ಅದು ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆ. ಇಲ್ಲಿನ ಜಂಕ್ಷನ್‌ಗಳಲ್ಲಿ ಸಾವಿರಾರು ಮಂದಿ ಸೇರಿ ಖುಷಿಪಟ್ಟರು. ಮಧ್ಯರಾತ್ರಿ 11.59 ಹಿಮ್ಮುಖ ಕೌಂಟ್‌ಡೌನ್ ಆರಂಭವಾಗಿ ಗಡಿಯಾರದ ಮುಳ್ಳು 12 ಗಂಟೆ ಬಾರಿಸುತ್ತಿದ್ದಂತೆ ಜನರಲ್ಲಿ ಸಂತಸದಿಂದ ಕೇಕೆ,

ಶಿಳ್ಳೆ ಹಾಕಿ ಕುಣಿದಾಡಿದರು. ಪರಸ್ಪರ ಹ್ಯಾಪಿ ನ್ಯೂ ಇಯರ್‌ ಎನ್ನುತ್ತಾ ಶುಭಾಶಯ ವಿನಿಮಯ ಮಾಡಿಕೊಂಡರು. ಪಟಾಕಿಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿದವು. ಹೊಸ ವರ್ಷಾಚರಣೆಗೆಂದು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ಗಳಲ್ಲಿ ಎರಡ್ಮೂರು ದಿನಗಳ ಮೊದಲೇ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಇನ್ನು, ಈ ಬಾರಿ ಕೋವಿಡ್‌ ನಿಬಂಧನೆಗಳ ಅನ್ವಯ ಬಿಬಿಎಂಪಿ ಆಚರಣೆಗೆ ಅವಕಾಶ ಕಲ್ಪಿಸಿತ್ತು. ಹೀಗಾಗಿ ರಾತ್ರಿ 8 ಗಂಟೆಯ ಸುಮಾರಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜನಸ್ತೋಮ ಹೆಚ್ಚಾಗುತ್ತಾ ಸಾಗಿತು. ಯುವ ಪ್ರೇಮಿಗಳು, ಸ್ನೇಹಿತರು, ರಂಗುರಂಗಿನ ಉಡುಗೆ ತೊಡುಗೆಗಳಲ್ಲಿ ಮಿಂಚಿದರು.


Spread the love

By admin