Spread the love

ಬೆಂಗಳೂರು: ಹೊಸ ವರ್ಷ ಬರಮಾಡಿಕೊಳ್ಳಲು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು ನಗರದ ಜನರು ಸಂಭ್ರಮಾಚರಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.‌ ಕೊರೊನಾ ಹಿನ್ನೆಲೆ ಕಳೆದ ಎರಡು ವರ್ಷಗಳಲ್ಲಿ ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅಡ್ಡಿ ಆತಂಕ ದೂರವಾಗಿದ್ದು ನಗರದೆಲ್ಲೆಡೆ ನ್ಯೂ ಇಯರ್ ವೆಲ್‌ಕಮ್‌ ಮಾಡಲು ಸಜ್ಜಾಗಿದ್ದಾರೆ.

 

ನಗರದಲ್ಲಿ ಹೊಸ ವರ್ಷ ಆಚರಣೆ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಆಗಬಾರದೆಂದು ಖಾಕಿ ಪಡೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಬೆಂಗಳೂರಿನೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದೆ. ಹೊಸ ವರ್ಷದ ಹಿನ್ನೆಲೆ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಬಾರ್​, ಪಬ್, ರೆಸ್ಟೋರೆಂಟ್ ಎಂದು ಜನರ ಜಮಾವಣೆ ಹೆಚ್ಚಾಗುತ್ತಿದೆ..

ಬಿಗ್ರೇಡ್ ರೋಡ್ ನಲ್ಲಿ ನೂಕುನುಗ್ಗಲು ಆಗದಿರಲು ಪ್ರತ್ಯೇಕವಾಗಿ ಬ್ಯಾರಿಕೇಡ್ ಹಾಕಲಾಗಿದೆ. ಮಹಿಳಾ ಸುರಕ್ಷತೆ ದೃಷ್ಠಿಯಿಂದ ವುಮೆನ್ ಐಸ್ ಲ್ಯಾಂಡ್ ಹಾಕಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಸುಮಾರು 700 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರ ಅಳವಡಿಲಾಗಿದೆ. ಅನುಮಾನಸ್ಪಾದವಾಗಿ ಕಂಡು ಬರುವವರ ನಿಗಾವಹಿಸಲು ಸಿಸಿಟಿವಿ ವಾರ್ ರೂಮ್ ನಿರ್ಮಿಸಲಾಗಿದೆ‌.


Spread the love

By admin