Spread the love

ಬೆಂಗಳೂರು: ಬಿಬಿಎಂಪಿ ಗೆ ವಾರ್ಡ್ ಮರುವಿಂಗಡಣೆಯಿಂದ ಮತ್ತೆ ಬಹುದೊಡ್ಡ ಆರ್ಥಿಕ ಹೊರೆಯುಂಟಾಗಲಿದೆ, ವಾರ್ಡ್‍ಗಳನ್ನು 198ರಿಂದ 243ಕ್ಕೆ ಹೆಚ್ಚಳ ಮಾಡಿದ್ದು ಬಿಬಿಎಂಪಿಗೆ ಮುಳುವಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. 45 ವಾರ್ಡ್‍ಗಳ ಸಂಖ್ಯೆ ಹೆಚ್ಚಳದಿಂದ ಕೋಟಿ ಕೋಟಿ ರೂ.

ವಾರ್ಷಿಕ ಆರ್ಥಿಕ ಹೊರೆ ಉಂಟಾಗಲಿದೆ. ಸ್ವತಃ ಬಿಬಿಎಂಪಿಯೇ ವಾರ್ಷಿಕ ಆರ್ಥಿಕ ಹೊರೆಯ ಅಸಲಿ ಚಿತ್ರಣವನ್ನು ಬಿಚ್ಚಿಟ್ಟಿದೆ.

ಕೇವಲ ಸಿಬ್ಬಂದಿ ವೇತನಕ್ಕೆ ವಾರ್ಷಿಕವಾಗಿ ನೂರಾರು ಕೋಟಿ ರೂ. ಬೇಕಾಗಿದೆ. ಸಿಬ್ಬಂದಿ ವೇತನ ಬಿಟ್ಟು ಕಚೇರಿ ಮತ್ತು ಇತರೆ ವೆಚ್ಚ ಸೇರಿ ತಿಂಗಳಿಗೆ 10 ರಿಂದ 15 ಕೋಟಿ ರೂ. ಬೇಕಾಗುತ್ತದೆ ಎನ್ನಲಾಗುತ್ತಿದೆ. ಹೆಚ್ಚು ಹುದ್ದೆ ಸೃಷ್ಟಿಸಿದ್ರೆ ಅದಕ್ಕೆ ಬಿಬಿಎಂಪಿಯೇ ವೇತನ ನೀಡ್ಬೇಕು. ಮೊದಲೇ ಆರ್ಥಿಕ ಸಂಕಷ್ಟದಲ್ಲಿರೋ ಪಾಲಿಕೆಗೆ ಇದು ಸಾಧ್ಯವಾಗುತ್ತಾ? ಅನ್ನೋ ಪ್ರಶ್ನೆ ಮೂಡಿದೆ.


Spread the love

By admin