Spread the love

ಬೆಂಗಳೂರು: ಯಲಹಂಕದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಲಯಸ್ಮಿತ ಎನ್ನುವ ಯುವತಿ ಪ್ರೀತಿಗೆ ಒಪ್ಪಲಿಲ್ಲ ಎಂದು ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಪವನ್ ಚೇತರಿಕೆ ಕಂಡಿದ್ದಾನೆ. ಈ ಕುರಿತು ಮೃತಳ ತಾಯಿ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಾಜಾನುಕುಂಟೆ ಠಾಣೆಯಲ್ಲಿ ಪವನ್ ಮತ್ತು ಕಾಲೇಜು ವಿರುದ್ದ ದೂರು ದಾಖಲಾಗಿದ್ದು, ಕಾಲೇಜು ಸಿಬ್ಬಂದಿ ನಿರ್ಲಕ್ಷ್ಯದಿಂದ ಕೊಲೆಯಾಗಿದೆ ಎಂದು ದೂರು ನೀಡಿದ್ದಾರೆ. ರಾಜಾನುಕುಂಟೆ ಪೊಲೀಸರು ಇದೀಗ ಪವನ್ ವಿಚಾರಣೆಗೆ ಮುಂದಾಗಿದ್ದಾರೆ. ಕೊಲೆ ಮಾಡಲೇಬೇಕು ಎಂದು ನಿರ್ಧರಿಸಿದ್ದ ಪವನ್ ಪಕ್ಕಾ ಪ್ಲಾನ್ ಮಾಡಿದ್ದ. ಪಾಗಲ್ ಪ್ರೇಮಿ ಪವನ್ ಲಯಸ್ಮಿತಾಳನ್ನ ಹುಚ್ಚನಂತೆ ಪ್ರೀತಿಸುತ್ತಿದ್ದು, ಇನ್​ಸ್ಟಾಗ್ರಾಮ್,

ಫೇಸ್ಬುಕ್​ಗಳಲ್ಲಿ ಲಯಸ್ಮಿತಾಳ ಫೋಟೋವನ್ನ ವಾಲ್ ಫೇಪರ್ ಹಾಕಿದ್ದ. ಕೇವಲ ಸೋಷಿಯಲ್ ಮೀಡಿಯಾ ಮಾತ್ರವಲ್ಲ ತನ್ನ ಎದೆಯ ಮೇಲು ಲಯಸ್ಮಿತಾಳ ಹೆಸರನ್ನ ಟ್ಯಾಟೂ ಹಾಕಿಸಿದ್ದ ಪಾಗಲ್ ಪ್ರೇಮಿ. ಇನ್ನು ಈ ಕೃತ್ಯಕ್ಕೂ ಒಂದು ಗಂಟೆ ಮೊದಲು ಸೋಶಿಯಲ್ ಮೀಡಿಯಾದಲ್ಲಿದ್ದ ಎಲ್ಲಾ ಫೋಟೋಗಳನ್ನ ಡಿಲೀಟ್‌ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇನ್ನೂ ಪ್ರೆಸಿಡೆನ್ಸಿ ವಿಶ್ವ ವಿದ್ಯಾಲಯದಲ್ಲಿ ಪದೇ ಪದೇ ಆಗುತ್ತಿರುವ ಅಹಿತಕರ ಘಟನೆಗಳನ್ನ ತಡೆಯುವಂತೆ ಒತ್ತಾಯಿಸಿ ನಾಳೆ ಪ್ರತಿಭಟನೆ ನಡೆಸಲು ಮುಂದಾದ ಸ್ಥಳಿಯ ಸಂಘ-ಸಂಸ್ಥೆ ಮತ್ತು ಗ್ರಾಮಸ್ಥರು. ನಾಳೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆಗೆ ಅನುಮತಿ ಕೇಳಿ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿಗೆ ಪತ್ರ ಕೊಡಲಾಗಿದೆ.


Spread the love

By admin