Spread the love

ಬೆಂಗಳೂರು: ಅನುಮತಿ ಇಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮಕ್ಕಳ ಫೋಟೋ ಬಳಸಿಕೊಂಡ ಆರೋಪದಡಿ ಎರಡು ಖಾಸಗಿ ಯೂಟ್ಯೂಬ್ ವಾಹಿನಿಗಳ ವಿರುದ್ಧ ಬೆಂಗಳೂರು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಡಿಕೆಶಿ ಕುಟುಂಬದ ಆಪ್ತರಾದ ಉಮೇಶ್ ಎಂಬುವವರು ನೀಡಿದ ದೂರಿನನ್ವಯ ಈ ಎಫ್‌ಐಆರ್ ದಾಖಲಾಗಿದೆ.

ಬಿ4ಯು ಕರ್ನಾಟಕ (B4uKannada) ಹಾಗೂ ಇಂಡಿಯಾ ರಿಪೋರ್ಟ್​ (India report) ಹೆಸರಿನ ಎರಡು ಯೂಟ್ಯೂಬ್ ವಾಹಿನಿಗಳು ‘ಹೂ ಇಸ್ ಅಭರಣ ಡಿ.ಕೆ ಶಿವಕುಮಾರ್’ ಹಾಗೂ ‘ಡಿಕೆಶಿ ಮಗ ಯಾರು..?’, ಬಂಡೆ ಮಕ್ಕಳು ಏನ್ಮಾಡ್ತಿದ್ದಾರೆ? ಎಂಬ ತಲೆಬರಹದಡಿ ವಿಡಿಯೋ ಸೃಷ್ಟಿಸಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿವೆ ಎಂದು ಉಮೇಶ್ ತಮ್ಮ ದೂರಿನಲ್ಲಿ ತಿಳಿಸಿದ್ದರು.


Spread the love

By admin